ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಶ್ರೀಕೃಷ್ಣಗಲ್ಲಿಯಲ್ಲಿ ದೀಪಾವಳಿಯ ಹಬ್ಬದ ನಿಮಿತ್ತ ಐದು ದಿನಗಳ ಕಾಲ ನಡೆಯುವ ಶ್ರೀಕೃಷ್ಣ ಮೂರ್ತಿಯ ಪೂಜನ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಆರಂಭಗೊಂಡಿತು.

ದಿನಾಂಕ:20-10-2025 ರಂದು ಸೋಮವಾರ ಬೆಳಿಗ್ಗೆ ಶ್ರೀ ದೇವರ ಮೂರ್ತಿಯ ಸ್ಥಾಪನೆ. 21-10-2025 ರಂದು ಮಂಗಳವಾರ ಬೆಳಿಗ್ಗೆ ಆರತಿ ಕಾರ್ಯಕ್ರಮ.22-10-2025 ರಂದು ಬುಧವಾರ ಶ್ರೀರಾಮ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ. 23-10-2025 ರಂದು ಗುರುವಾರ ಬೆಳಿಗ್ಗೆ ಸೂಪೇಕರ ಬಂಧುಗಳಿಂದ ಭಜನೆ ಹಾಗೂ ಅದೇ ದಿನ ರಾತ್ರಿ ಚಿಕ್ಕ ಮಕ್ಕಳಿಂದ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮ.24-10-2025 ರಂದು ಶುಕ್ರವಾರ ಬೆಳಿಗ್ಗೆ ಶ್ರೀ ಸತ್ಯನಾರಾಯಣ ದೇವರ ಪೂಜೆ,ತೀರ್ಥ,ಪ್ರಸಾದ ವಿತರಣೆ.ಮಧ್ಯಾಹ್ನ ಅನ್ನಪ್ರಸಾದ,ಸಂಜೆ ಭಜನಾ ಮಂಡಳಿಯವರಿಂದ ಮಂಡಳಿಯವರಿಂದ ಭಜನೆ ಕಾರ್ಯಕ್ರಮ,ಶ್ರೀ ದೇವರ ಫಲಪ್ರಸಾದಗಳ ಸವಾಲ ಕಾರ್ಯಕ್ರಮ,ಭಕ್ತರ ಮನರಂಜನೆಗಾಗಿ ಮರಾಠಿ ನಾಟಕ ಪ್ರದರ್ಶನ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ಕೃಪೆಗೆ ಪಾತ್ರ ರಾಗಬೇಕೆಂದು ಸಂಘಟಕರು ವಿನಂತಿಸಿದ್ದಾರೆ.