ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖದಲ್ಲಿ ನಡೆಯುತ್ತಿರುವ ಸಪ್ತಸ್ವರ ಸೇವಾ ಸಂಸ್ಥೆಯವರ ಯಕ್ಷಗಾನ ದಶಮಾನೋತ್ಸವದ ಎಂಟನೇಯ ದಿನದ ಕಾರ್ಯಕ್ರಮ ಜನಮನಸೂರೆಗೊಂಡಿತು.
ದಿವಂಗತ ಶೇಷಗಿರಿ ಗಣಪತಿ ಗಾಂವ್ಕರ,ಬೀಗಾರ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಅಜಿತ ಆರ್ ಹೆಗಡೆ ದೀಪ ಪ್ರಜ್ವಲನ ಗಣ್ಯರೊಂದಿಗೆ ನೆರವೇರಿಸಿದರು. ರಾಮಕೃಷ್ಣ ಭಟ್ಟ ಕರಿಯಾದಿ ವೈದಿಕರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅನಂತ ಆರ್ ಭಟ್ಟ, ದಯಾನಂದ ದಾನಗೇರಿ, ಪರಮೇಶ್ವರ ಎನ್ ಸಿದ್ದಿ,ಸರಸ್ವತಿ ಗಜಾನನ ಭಾಗ್ವತ,ರಾಧಾ ಭಟ್ಟ ಉಪಸ್ಥಿತರಿದ್ದರು,ಗಣ್ಯರು ಕಾರ್ಯಕ್ರಮದ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು. ಸಪ್ತಸ್ವರ ಸೇವಾ ಸಂಸ್ಥೆಯ ವತಿಯಿಂದ ಸುಮಾ ಹೆಗಡೆ ಗಡಿಗೆಹೊಳೆ ಯಕ್ಷಗಾನ ಕ್ಷೇತ್ರ ಹಾಗೂ ಪಾರ್ವತಿ ಶೇಷಗಿರಿ ಗಾಂವಕರ ಮಹಿಳಾ ಕ್ಷೇತ್ರದಲ್ಲಿನ ಸಾಧನೆಗಾಗಿ ಗೌರವಿಸಿ, ಸನ್ಮಾನಿಸಲಾಯಿತು.ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ, ಪದಾಧಿಕಾರಿಗಳು,ಭಾಗವತರಾದ ಆನಂದು ಆಗೇರ ಇದ್ದರು.ರಾಧಾ ಹೆಗಡೆ ಕಾರ್ಯಕ್ರಮದ ಸ್ವಾಗತ, ನಿರೂಪಣೆ, ವಂದನಾರ್ಪಣೆ ಮಾಡಿದರು. ನಂತರ ಯಕ್ಷಕಲಾ ಸಂಗಮ (ರಿ)ಶಿರಸಿ ಇವರಿಂದ ಹೀರಣ್ಯಾಕ್ಷ ವಧೆ ಯಕ್ಷಗಾನ ಪ್ರದರ್ಶನ ನಡೆಯಿತು.