ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಗವೇಗಾಳಿ ಶಾಲೆಗೆ ಕನ್ನಡ ಮನಸುಗಳು ಕರ್ನಾಟಕ ತಂಡದವ ರು ಭೇಟಿ ನೀಡಿ ಸರ್ಕಾರಿ ಶಾಲೆ ಉಳಿಸಿ ಅಭಿಯಾನದಡಿಯಲ್ಲಿ ಶಾಲೆಗೆ ಅಚ್ಚುಕಟ್ಟಾಗಿ ಬಣ್ಣ ಹಚ್ಚಿ, ಆಕರ್ಷಕವಾಗಿ ಚಿತ್ರಗಳನ್ನು ಬಿಡಿಸಿ ಶಾಲೆಗೆ ಹೊಸ ರೂಪ ನೀಡಿದರು.ಸರ್ಕಾರಿ ಶಾಲೆ ಉಳಿಸಿ ಅಭಿಯಾನದಲ್ಲಿ ಸುಮಾರು 500 ಜನ ಸದಸ್ಯರಿದ್ದಾರೆ,61ನೇ ಶಾಲೆ ಇದಾಗಿದೆ.
ಶಾಲೆಯ ಆವರಣ ಹಾಗೂ ಗೋಡೆಗಳು ಹಣ್ಣಿನ,ತರಕಾರಿಗಳ,ಗಣಿತ,ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪ್ರಾಣಿಗಳ,ಪಕ್ಷಿಗಳ ಆಕರ್ಷಕ ಚಿತ್ರಗಳ ಚಿತ್ತಾರದಿಂದ ಕಂಗೊಳಿಸುತ್ತಿದೆ. ಕನ್ನಡ ಮನಸುಗಳ ಕರ್ನಾಟಕ ತಂಡದವರಿಗೆ ಶಾಲೆಯ ಮುಖ್ಯ ಶಿಕ್ಷಕ ಕಿರಣಕುಮಾರ ನಾಯ್ಕ,ಸಹ ಶಿಕ್ಷಕರು,ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಮೋದ ಮಿರಾಶಿ, ಉಪಾಧ್ಯಕ್ಷೆ ಶರ್ಮಿಳಾ ಖಂಡೇಪಾರ್ಕರ, ಸದಸ್ಯರು, ಪಾಲಕರು,ಪೋಷಕರು,ವಿಕ್ರಮ ಗವೇಗಾಳಿ ಅಭಿನಂದನೆ ಸಲ್ಲಿಸಿದ್ದಾರೆ.