ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನಲ್ಲಿ ಪೊಲೀಸ್ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ ಪೊಲೀಸ್ ಇಲಾಖೆಗೆ ಸಂಬಂದಿಸಿದ ಮಾಹಿತಿ. ಕೇಳಿದರೆ ಸೂಕ್ತ ವಾದ ಮಾಹಿತಿ ನೀಡುವುದರ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದಾರೆ.
ಅದೇ ರೀತಿ ಇಂದಿನ ದಿವಸ ದಿನಾಂಕ: 20 ರಂದು ಜೊಯಿಡಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾಪೇಲಿ ಕ್ರಾಸ್ ಹತ್ತಿರ ದಾಂಡೇಲಿ ಉಪ-ವಿಭಾಗದ ಮಾನ್ಯ ಉಪಾಧೀಕ್ಷಿಕರಾದ ಶಿವಾನಂದ ಮದರಖಂಡಿ ಮುಂದಾಳತ್ವದಲ್ಲಿ ಜೊಯಿಡಾದ ಪಿಎಸ್ಐ ಮಹೇಶ್ ಮಾಳಿ ರವರು ಹೆಲ್ಮೆಟ್ ಧರಿಸದೆ ಪ್ರಯಾಣ ಮಾಡುವದು, ಹೇಗೆ ತಪ್ಪು ಎಂಬ ಮಾಹಿತಿ ನೀಡುತ್ತಾ, ಸೀಟ್ ಬೆಲ್ಟ್ ಧರಿಸುವಂತೆ, ರೋಡ್ ರೇಜ್ ಮತ್ತು ರೋಡ್ ಕರ್ಟಸಿ ಹಾಗೂ ಮಧ್ಯ ಸೇವನೆ ಮಾಡಿ ವಾಹನ ಚಲಾಯಿಸದಂತೆಜಾಗೃತಿ ಅಭಿಯಾನ ಮಾಡಿದರು. ಮಧ್ಯ ಸೇವನೆ ಮಾಡಿ ವಾಹನ ಚಲಾಯಿಸುವವರ ಮಧ್ಯ ಸೇವನೆ ಪರೀಕ್ಷೆಹೇಗೆ ಮಾಡುವುದು ಎಂಬ ಬಗ್ಗೆ ಜಾಗೃತಿ ಕೈಗೊಂಡರು.ಇದು ಸಾರ್ವಜನಿಕರಿಗೆ ಉತ್ತಮ ಮಾಹಿತಿ ಯಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ರಿಂದ ಕೇಳಿ ಬಂದಿದೆ.