ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ: ತಾಲೂಕಿನ ಇಡಗುಂದಿ ಬಳಿ ಕಳೆದ ವಾರ ರಾಷ್ಟ್ರೀಯ ಹೆದ್ದಾರಿ 52 ರ ಪಕ್ಕ ಗದ್ದೆಗೆ ಉರುಳಿದ್ದ ಟ್ಯಾಂಕರ್ ಲಾರಿಯನ್ನು ಬುಧವಾರ ಮೇಲಕ್ಕೆತ್ತಲಾಯಿತು.

 

​ಎರಡು ಕ್ರೇನ್‌ಗಳನ್ನು ಬಳಸಿ ಲಾರಿಯನ್ನು ಮೇಲಕ್ಕೆತ್ತಲಾಯಿತು. ಈ ವೇಳೆ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಹೆದ್ದಾರಿಯಲ್ಲಿ ಎರಡೂ ಕಡೆ ಕಿಲೋಮೀಟರ್ ಗಟ್ಟಲೆ ವಾಹನಗಳು ಸರತಿಯಲ್ಲಿ ನಿಂತಿದ್ದವು. ಲಾರಿಯನ್ನು ತೆರವುಗೊಳಿಸಿದ ನಂತರ ಪೊಲೀಸರು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು.

 

ವಾರದ ಹಿಂದೆ ಇಡಗುಂದಿಯ ಅಕ್ಕಿ ಗಿರಣಿ ಎದುರಿನ ಗದ್ದೆಗೆ ಸಿಮೆಂಟ್ ಟ್ಯಾಂಕರ್ ಲಾರಿ ಪಲ್ಟಿಯಾಗಿತ್ತು. ಕಾರ್ಮಿಕರನ್ನು ಬಳಸಿ ಎರಡು ಮೂರು ದಿನಗಳ ಕಾಲ ಲಾರಿಯಲ್ಲಿದ್ದ ಸಿಮೆಂಟ್ ಅನ್ನು ಬಕೆಟ್ ಮೂಲಕ ಇನ್ನೊಂದು ಟ್ಯಾಂಕರ್ ಗೆ ಹಾಕಿ ಟ್ಯಾಂಕರ್ ಖಾಲಿ ಮಾಡಿದ ನಂತರ ಲಾರಿಯನ್ನು ಮೇಲಕ್ಕೆತ್ತಲಾಯಿತು.