ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕು ಪಟ್ಟಣ ಎಲ್ಲೆಡೆ ಚಳಿಗಾಲದ ಹೊಡತಕ್ಕೆ ಚಿರತೆಯ ಹಾವಳಿ ಹೆಚ್ಚಾಗುತ್ತಿದೆ.
ದಿನಕ್ಕೊಂದು ಚಿರತೆಯ ದಾಳಿಯ ಸಂಗತಿ ಅಲ್ಲಿ ಇಲ್ಲಿ ಕೇಳಿ ಬರುತ್ತಿದೆ.ಶುಕ್ರವಾರ ಪಟ್ಟಣ ವ್ಯಾಪ್ತಿಯ ಲಿಂಗನಕೊಪ್ಪ ಬಳಿ ಚಿರತೆಯೊಂದು ಆಕಳ ಮಣಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.ರಾಮನಕೊಪ್ಪ ಹುಣಸೆಟ್ಟಿಕೊಪ್ಪ ಈ ಭಾಗದಲ್ಲಿ ಚಿರತೆ ಸಂಚರಿಸುತ್ತಿದ್ದು ಇಂದು ಈ ಪ್ರದೇಶದಲ್ಲಿ ಕಾಣಿಸಿಕೊಂಡು ಆಕಳನ್ನು ಬಲಿ ತೆಗೆದುಕೊಂಡಿದೆ
ಯಲ್ಲಾಪುರದ ಗ್ರಾಮೀಣ ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ ಚಿರತೆಯ ಹಾವಳಿ ಹೆಚ್ಚಾಗಿದೆ. ಜನರು ತಮ್ಮ ಮನೆಯ ಸಾಕು ನಾಯಿ ದನ ಕುರುಗಳನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.