ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ತಾಲೂಕಿನ ಶಿಕ್ಸಣ ಇಲಾಖೆ ತಾಲೂಕಾ ಆಡಳಿತ ಸೇರಿ ಇಂದು ಸರ್ವಪಲ್ಲಿಡಾ/ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಗುರು ಗೌರವ ಅರ್ಪಣೆ ಕಾರ್ಯಕ್ರಮ ವನ್ನಾಗಿ ವಿಜೃಂಭಣೆ ಯಿಂದ ಜೋಯಿಡಾ ದ ಕುಣುಬಿ ಭವನ ದಲ್ಲಿ ಆಚರಿಸಿದರು, ತಾಲೂಕಿನಲ್ಲಿ ರುವ ಶಿಕ್ಷಕರು, ಗೌರವ ಶಿಕ್ಷಕರು, ಅಧಿಕಾರಿಗಳು, ಜನಪ್ರತಿನಿದಿಗಳು ಕಾರ್ಯಕ್ರಮ ದಲ್ಲಿ ಭಾಗವಹಿಸಿ, ಸಂತಸ ಗೊಂಡರು. ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯಕ ಮತ್ತು ಶಿಕ್ಷಕರ ಬಳಗ ಉತ್ಸಾಹ ದಿಂದ ಓಡಾಡಿ ಉತ್ತಮ ಸಂಘಟನೆ ಮಾಡುವ ಮೂಲಕ, ಗುರುಗಳ ಸ್ಮರಣೆ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ನಾಡಗೀತೆ ಯೊಂದಿಗೆ ಪ್ರಾರಂಭಿಸಲಾಯಿತು ಕಾರ್ಯಕ್ರಮ ಉದ್ಘಾಟನೆ ಮಾಡಿದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎನ್ ಭಾರತಿ ಗುರು ಬ್ರಮ್ಮ ಗುರು ವಿಷ್ಣು ಎಂದು ಮಾತನ್ನು ಪ್ರಾರಂಭಿಸಿ ತಮಗೆ ಮಾರ್ಗದರ್ಶನ ನೀಡಿದವರನ್ನು ಸ್ಮರಿಸಿದರು ಉತ್ತಮ ನಾಗರಿಕರಾಗಲು ಶಿಕ್ಷಕರ ಪಾತ್ರದ ಕುರಿತು ಮಾತನಾಡಿದರು ತಾಲೂಕಿನ ಶಿಕ್ಷಣ ದ ಕುರಿತು ಮಾತನಾಡಿ ಮಕ್ಕಳ ನಿರೀಕ್ಷಿತ ಕಲಿಕೆಗೆ ಹೆಚ್ಚಿನ ಗಮನ ಹರಿಸಲು ಸೂಚಿಸಿದರು. ಕಾರ್ಯಕ್ರಮ ಆರಂಭ ಕ್ಕೂ ಮೊದಲು ತಾಲೂಕಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ, ಶಿಕ್ಷಕರು ಸರ್ವಪಲ್ಲಿ ಡಾ /ರಾಧಾ ಕೃಷ್ಣನ್ನ್ ಅವರಿಗೆ ಗೌರವಅರ್ಪಣೆ ಸಲ್ಲಿಸಿದರು,ಕವಿ ಶಿಕ್ಷಕರು ಕವನವಾಚನ, ಹಾಡು ಗಳನ್ನುವೇದಿಕೆಯಲ್ಲಿ ಹಾಡುವ ಮೂಲಕ ಸೇರಿದ, ಜನರನ್ನು ರಂಜಿಸಿದರು ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಜನಪ್ರತಿನಿದಿಗಳಾದ ಸಂತೋಷ ಮಂತೆರೋ ಪ್ರವೀಣ ದೇಸಾಯಿ ಸ್ಯಾಮ್ ಪೋಕಳೆ ಚಂದ್ರ ಕಾಂತ್ ದೇಸಾಯಿ ಸಿಡಿಪಿಒ ಬಸವರಾಜ್ ಕ್ಷೆತ್ರ ಶಿಕ್ಷಣಾಧಿಕಾರಿ, ಬಶೀರ್ ಅಹಮದ್ ಶೇಖ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯಕ ಇತರ ಶಿಕ್ಷಕರ ಪ್ರಮುಖರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ಶಿಕ್ಷಕರು ನಿವೃತ್ತಿ ಶಿಕ್ಷಕರನ್ನು ಗೌರವಿಸಲಾಯಿತು.

ಕ್ಷೆತ್ರ ಶಿಕ್ಷಣಾಧಿಕಾರಿ ಬಶೀರ್ ಅಹ್ಮದ್ ಶೇಖ ಎಲ್ಲರನ್ನೂ ಸ್ವಾಗತಿಸಿದರು, ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯಕ ಮತ್ತು ಮಾದೇವ್ ಹಳದನಕರ ಶಿಕ್ಷಕರು ಉತ್ತಮ ಸಂಘಟನೆ ಮಾಡಿದ್ದರು.