Banner Ad

ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ: ಪಟ್ಟಣ ವ್ಯಾಪ್ತಿಯ ಕೊಂಡ್ಲಿಯ ಶ್ರೀ ಹನುಮಂತ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಸಿದ್ದಾಪುರ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು.
ದೇವಾಲಯದಿಂದ ಹೊರಟ ಪಲ್ಲಕ್ಕಿ ಮೆರವಣಿಗೆ ಚಂದ್ರಗುತ್ತಿ ರಸ್ತೆ ಮೂಲಕ ಪಟ್ಟಣಕ್ಕೆ ಆಗಮಿಸಿತು,

ಪಟ್ಟಣದ ತಿಮ್ಮಪ್ಪ ನಾಯಕ ವೃತ್ತದಲ್ಲಿ ಮಹಿಳೆಯರ ತಂಡ ಭಕ್ತಿ ಗೀತೆ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದರು. ನಂತರ ಗಾರ್ಡನ್ ಸರ್ಕಲ್, ಹಳೆ ಬಸ್ ನಿಲ್ದಾಣ, ಹೊನ್ನೆಗುಂಡಿ ರಸ್ತೆ ಹಾಗೂ ರಾಜಮಾರ್ಗದಲ್ಲಿ ಸಾಗಿ ಹಾಳದಕಟ್ಟಕ್ಕೆ ತೆರಳಿ ನಂತರ ದೇವಾಲಯಕ್ಕೆ ಮರಳಿತು.

Banner Ad

ದೇವಾಲಯದಿಂದ ಪಲ್ಲಕ್ಕಿ ಉತ್ಸವದ ಜೊತೆಗೆ ಭಜನಾ ತಂಡವು ಶ್ರೀ ರಾಮ, ಹನುಮಂತ ದೇವರ ಭಕ್ತಿಗೀತೆಗಳನ್ನು ಹಾಡುತ್ತಾ, ಜಾಗಟೆ ಬಾರಿಸುತ್ತಾ ಭಕ್ತಿ ಸಾಗಿದರು. ಮನೆ ಸಮೀಪ ಮೆರವಣಿಗೆ ಬರುತ್ತಿರುವಾಗ ಭಕ್ತರು ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.

ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷರು. ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಹಾಗೂ ಊರಿನ ಮತ್ತು ನಾಗರಿಕರು ಹಾಗೂ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆ ಉದ್ದಕ್ಕೂ ಸಾಗಿದರು.

Banner Ad