ಸುದ್ದಿ ಕನ್ನಡ ವಾರ್ತೆ
ಶಿರಸಿ: ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಆಘನಾಶಿನಿ ಹಾಗೂ ಬೇಡ್ತಿ ನದಿಗಳ ಸಂರಕ್ಷಣೆಗಾಗಿ ಹಮ್ಮಿಕೊಳ್ಳಲಾಗಿದ್ದ ವಿಶಿಷ್ಟ ಭಜನಾ ಅಭಿಯಾನವು ರಾಮನವಮಿಯ ಶುಭ ಸಂದರ್ಭದಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು.

ನದಿಗಳ ಉಳಿವಿಗಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆರಂಭವಾದ ಈ ಅಭಿಯಾನದಲ್ಲಿ ಶ್ರೀರಾಮ ಭಜನಾ ತಂಡದ ಮಕ್ಕಳು ಹಾಗೂ ಮಹಿಳೆಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಅಭಿಯಾನದ ಪ್ರಾರಂಭದ ದಿನದಿಂದಲೂ ಪ್ರತಿದಿನ ಸಂಜೆ ಭಜನೆ ನಡೆಸುವ ಮೂಲಕ ನದಿ ಸಂರಕ್ಷಣೆಯ ಸಂಕಲ್ಪಕ್ಕೆ ಆಧ್ಯಾತ್ಮಿಕ ಬಲ ನೀಡಿದರು.

ಕೊನೆಯ ದಿನವಾದ ಕುಂಟೆಮನೆಯ ಅಭಿಯಾನದ ರಾಮನವಮಿಯಂದು ಶ್ರೀರಾಮ ದೇವರ ಸನ್ನಿಧಿಯಲ್ಲಿ ವಿಶೇಷ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಪವಿತ್ರ ಸನ್ನಿಧಿಯಲ್ಲಿ ಭಜನೆ ಸಲ್ಲಿಸುವ ಮೂಲಕ ತಂಡದ ಸದಸ್ಯರು ಅಭಿಯಾನದಲ್ಲಿ ಸಂಪೂರ್ಣವಾಗಿ ಭಾಗಿಗಳಾಗಿ ನದಿ ಮೂಲಗಳ ರಕ್ಷಣೆಗಾಗಿ ಪ್ರಾರ್ಥಿಸಿದರು. ಪ್ರಕೃತಿ ಮತ್ತು ಸಂಸ್ಕೃತಿಯನ್ನು ಬೆಸೆಯುವ ಈ ಅಭಿಯಾನವು ಸಾರ್ವಜನಿಕರಲ್ಲಿ ಪರಿಸರ ರಕ್ಷಣೆಯ ಕುರಿತು ಹೊಸ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದೆ.