ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಸರಕಾರ ದಿಂದ ಯಾವುದೇ ಸೌಲಭ್ಯ ಪಡೆದು ಕೊಂಡರೂ ಅದರ ಸರಿಯಾದ ಉಪಯೋಗ ಮಾಡಿಕೊಳ್ಳ ಬೇಕು, ಅಂದಾಗ ಮಾತ್ರ ಕೊಟ್ಟ ಸರಕಾರ ಕ್ಕೂ ಪಡೆದು ಕೊಂಡವರಿಗೂ ಒಳ್ಳೆಯ ದಾಗುತ್ತದೆ ಎಂದು ಶಾಸಕರು ಆಡಳಿತ ಸುಧಾರಣಾ ಸಮೀತಿ ಅಧ್ಯಕ್ಷರೂ ಆಗಿರುವ ಆರ್ ವಿ ದೇಶಪಾಂಡೆ ಹೇಳಿದರು, ಅವರು ತಾಲೂಕಿನ ಕುಂಬಾರವಾಡ ದಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡ ಸಮುದಾಯ ಆಧಾರಿತ ಸಂರಕ್ಷಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ನನ್ನ ಕ್ಷೆತ್ರ ದಲ್ಲಿ ಅರಣ್ಯ ಇಲಾಖೆಯ ಕಾಳಿ ಹುಲಿ ಸಂರಕ್ಷಿತ ಕ್ಷೆತ್ರ ಕ್ಕೆ ಉತ್ತಮ ನಿರ್ದೇಶಕರು ದೊರಕಿದ್ದಾರೆ, ಅವರ ಅವಧಿ ಯಲ್ಲಿ ತುಂಬಾ ಉತ್ತಮ ಕಾರ್ಯ ನಡೆಯುತ್ತಿದೆ, ಜನರ ಸಹಭಾಗಿತ್ವ ದಲ್ಲಿ ಅವರು ಕೈಕೊಂಡ ಕೆಲಸ ಕ್ಕೆ ನಾನು ನಿರ್ದೇಶಕರಾದ ನಿಲೇಶ್ ಶಿಂದೆ ಅವರನ್ನು ಅವರ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಗಳನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ಕೊಡಮಾಡಿದ ಹಲವು ಸಾಮಗ್ರಿಗಳನ್ನು ಪಲಾನುಭವಿಗಳಿಗೆ ವಿತರಿಸಿದರು, ಕಾಳಿಹುಲಿ ಪ್ರತಿಷ್ಠಾನ ದಿಂದ ಸಂಗೀತ ಸಲಕರಣೆ ಗಳನ್ನು ವಿದ್ಯಾರ್ಥಿ ಗಳಿಗೆ ಕಲಿಯಲು ತಂದಿರುವ ಬಗ್ಗೆ ಹೆಮ್ಮೆ ಪಟ್ಟು, ಮನುಷ್ಯ ತನ್ನ ಜೀವನ ದಲ್ಲಿ ಸಾಧನೆ ಮಾಡಬೇಕಾದರೆ ಎಲ್ಲ ಕ್ಷೆತ್ರವೂ ಬರುತ್ತದೆ, ಅದರಲ್ಲಿ ಸಂಗೀತ ಕ್ಷೆತ್ರವೂ ಬರುತ್ತದೆ ಎಂದು ಇಲ್ಲಿನ, ಕಾಳಿ ಹುಲಿ ನಿರ್ದೇಶಕರು ತೋರಿಸಿ ಕೊಟ್ಟಿದ್ದಾರೆ, ಜನಪರ ವಾದ ಎಲ್ಲ ಸೌಲಭ್ಯ ಗಳು ಜನರಿಗೆ ಸಿಗಲಿ ಎಂದು, ಪ್ರಯತ್ನಿಸಿದ್ದಾರೆ ಎಂದರು, ಕಾಳಿ ಹುಲಿ ಅರಣ್ಯ ಇಲಾಖೆಯ ಹಿರಿ ಕಿರಿಯ ಅಧಿಕಾರಿಗಳು ಇದ್ದರು. ಇದೇ ಸಂದರ್ಭದಲ್ಲಿ,ಜೋಯಿಡಾ ಸರಕಾರಿ ಆಸ್ಪತ್ರೆ ಯಲ್ಲಿ ಉಚಿತ ಆರೋಗ್ಯ ಶಿಬಿರ ವನ್ನು, ತಾಲೂಕು ಪಂಚಾಯತ ದಲ್ಲಿ ಅಂಗವಿಕಲರಿಗೆ ಉಚಿತ ವಾಹನ ವನ್ನು ವಿತರಿಸಿದರು, ಹಳಿಯಾಳ ಎ ಪಿ ಎಂ ಸಿ ಉಪ ಶಾಖೆ ಯನ್ನು ಜೋಯಿಡಾ ದಲ್ಲಿ ಪ್ರಾರಂಭಿಸಿದರು.
