ಸುದ್ದಿ ಕನ್ನಡ ವಾರ್ತೆ
ಕಾರವಾರ: ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ನಡೆಸಿದ ಇಂಟರ್ ಇನ್ಸಿಟ್ಯೂಷನಲ್ ಟೆಕ್ನಿಕಲ್ ಇನ್ನೋವೇಶನ್ ಚಾಲೆಂಜ್(Inter institutional Tecnical innovation challenge) ಸ್ಪರ್ಧೆಯಲ್ಲಿ ಜೋಯಿಡಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 4 ನೇ ಸೆಮಿಸ್ಟ‌ರ್ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳ ತಂಡ ಅರೆ ನಿದ್ರಾವಸ್ಥೆಯಲ್ಲಿ ವಾಹನ ಚಲಾಯಿಸುವ ಚಾಲಕರನ್ನು ಎ ಐ ಮೂಲಕ ಎಚ್ಚರಿಸುವ ಸಾಧನವನ್ನು ವೇಕ್ ಗಾರ್ಡ್ ವೆಟ್ ಮೂಲಕ ಪ್ರಸ್ತುತಪಡಿಸಿ ಗಣಕಯಂತ್ರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು ವಿಭಾಗದ ವಿದ್ಯಾರ್ಥಿಗಳಾದ ಅರ್ಮಾನ್ ಜಕಾತಿ, ಮನೋಜ ನಂದೋಳ್ಳರ, ಪ್ರಸನ್ನ ಕುಂದುರ್ಕರ, ಪ್ರಶಾಂತ್ ಸಾವಂತ,ವಿರಾಜ ನಾಯ್ಕ ಮಾದರಿಯ ಪ್ರದರ್ಶನ ನೀಡಿದರು ಹಾಗೂ ನಾಲ್ಕನೇ ಸೆಮಿಸ್ಟ‌ರ್ ಎಲೆಕ್ಟ್ರಾನಿಕ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ಕಂಪನ ಶಕ್ತಿಯಿಂದ ವಿದ್ಯುತ್ ಉತ್ಪಾದನೆ( vibration energy harvesting) ಮಾದರಿ ಪ್ರಸ್ತುತಪಡಿಸಿ ಈ & ಸಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದರು.

ವಿಭಾಗದ ವಿದ್ಯಾರ್ಥಿಗಳಾದ ಪೂಜಾ ಪಾಲಕರ, ಪ್ರತಿಕ್ಷಾ ನಾಯ್ಕ, ಕಮಲಾಕರ ಗಾವಡಾ, ಉಮೇಶ ಗಾವಡಾ, ಶಿವಕುಮಾರ್ ತೋರಗಲ್ ಮಾದರಿಯ ಪ್ರದರ್ಶನ ನೀಡಿದರು ಮತ್ತು ನಾಲ್ಕನೇ ಸೆಮಿಸ್ಟರ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ತಂಡ ಟರ್ಮಿನೇಟರ್ ಜೆ 162 ಮಾದರಿ ಪ್ರಸ್ತುತಪಡಿಸಿ ಯಾಂತ್ರಿಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದರು ವಿಭಾಗದ ವಿದ್ಯಾರ್ಥಿಗಳಾದ ನಾರಾಯಣ ದಳವಿ, ಸಕ್ಷಮ್ ಮಹಾಲೆ, ಶಿವಾನಂದ ಡೇರೆಕರ, ಧನುಷ್ ಮೇಸ್ತಾ, ಸಮೀರ್ ಡಂಕೆವಾಲೆ, ಪ್ರದರ್ಶನ ನೀಡಿದರು ಸ್ಪರ್ದೆಯಲ್ಲಿ ಕೆಪಿಟಿ ಮಂಗಳೂರು, ಜಿಪಿಟಿ ಕುಶಾಲನಗರ, ಜಿಪಿಟಿ ಕಾರವಾರ, ಆರ್ ಎನ್ ಎಸ್ ಶಿರಸಿ, ವಿದ್ಯಾಧಿರಾಜ ಕಾಲೇಜು ಕುಮಟ, ಜಿಪಿಟಿ ಸಿದ್ಧಾಪುರ, ಜಿಪಿಟಿ ಹಳಿಯಾಳ ಮತ್ತಿತರ ಪಾಲಿಟೆಕ್ನಿಕ್ ತಂಡಗಳು ಭಾಗವಹಿಸಿದ್ದವು ಇದರಲ್ಲಿ ಜೋಯಿಡಾ ಪಾಲಿಟೆಕ್ನಿಕ್ ಕಾಲೇಜಿನ ತಂಡಗಳು ಒಂದು ಪ್ರಥಮ, ಎರಡು ದ್ವಿತೀಯ ಬಹುಮಾನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನಮಾಡಿದ ಉಪನ್ಯಾಸಕರುಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಕೃಷ್ಣವೇಣಿ ಆರ್ ಎನ್. ಮತ್ತು ವಿಭಾಗಾಧಿಕಾರಿಗಳಾದ ಶ್ರೀಮತಿ ವಿನಯಾ ಕಾಮತ್ ಹಾಗೂ ಉಪನ್ಯಾಸಕರು, ಕಛೇರಿ ಸಿಬ್ಬಂದಿವರ್ಗದವರು ಅಭಿನಂದಿಸಿದರು. ಈ ಸಾಧನೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಮಾತ್ರವಲ್ಲದೆ ಸಂಸ್ಥೆಯ ಗುಣಮಟ್ಟದ ಶಿಕ್ಷಣ ಹಾಗೂ ಮಾರ್ಗದರ್ಶನವನ್ನು ಪ್ರತಿಬಿಂಬಿಸುತ್ತದೆ, ಕಾಲೇಜಿನ ಈ ಸಾಧನೆಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಯಿತು.