ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ರವರ ಆದೇಶದಂತೇ ಯುಗಾದಿ ಪಾಠದಿಂದ ರಾಮನವಮಿಯವರೆಗೆ ಅಂದರೆ 9 ದಿನಗಳ ಕಾಲ ಸಂಜೆ 4 ರಿಂದ 6 ರ ತನಕ ಎಲ್ಲ ದೇವಸ್ಥಾನಗಳಲ್ಲಿ ನದಿ ತಿರುವು ಯೋಜನೆ ವಿರೋಧಿಸಿ ಭಜನಾ ಜಾಗ್ರತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಅದರಂತೆಯೇ ಅಂಕೋಲಾ ತಾಲೂಕಿನ ಕೊಡ್ಲ ಗದ್ದೆ ಗ್ರಾಮದೇವರಾದ ಶ್ರೀ ಲಕ್ಷೀನರಸಿ೦ಹ ದೇವಸ್ಥಾನ ಕೊಡ್ಲ ಗೆದ್ದೆಯಲ್ಲಿ ನದಿ ತಿರುವು ಯೋಜನೆ ವಿರೋಧಿಸಿ ಜನಾ ಜಾಗ್ರತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಯುಗಾದಿ ಪಾಡ್ಯದಿಂದ ಈ ಅಭಿಯಾನ ಆರಂಭಗೊಂಡಿದೆ.
ಇಂದು ಆರಂಭಗೊಂಡ ಈ ಅಭಿಯಾನದಲ್ಲಿ ಕೊಡ್ಲಗದ್ದೆಯ ಮಾತೃ ಮಂಡಳಿಯ ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ಲಕ್ಷ್ಮಿ ನರಸಿಂಹ ದೇವರ ಸನ್ನಿಧಾನದಲ್ಲಿ ಭಜನಾ ಸೇವೆ ಸಲ್ಲಿಸಿದರು.
