ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ತಾಲೂಕಿನ ಬಿ ಜೆ ಪಿ ಯ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು ಗಿರೀಶ ಆರ್ ಗೋಸಾವಿ ಅವರು ತಾಲೂಕಿನ ಸಮಸ್ಯೆ ಕುರಿತು ಹೇಳಿಕೆ ನೀಡಿದ್ದಾರೆ .

ಅಂದು ಸೂಪಾ ತಾಲೂಕು ಒಂದು ಅತಿ ಸುಂದರವಾದ ಕ್ಷೇತ್ರವಾಗಿತ್ತು ಆದರೆ ಸುಪಾ ಅಣೆಕಟ್ಟಿನಿಂದ ನಮಗೆ ಶಾಪವಾಯಿತು ಇಷ್ಟೇ ಅಲ್ಲದೆ ರಾಮನಗರಕ್ಕೆ ಪುನರ್ ವಸತಿ ಆದ ನಂತರ ಈಗಲಾದರೂ ಒಳ್ಳೆ ದಿನ ಬರಬಹುದೇಂತ ಒಳ್ಳೆಯದು ಆಗಬಹುದೇನೋ ಅಂದುಕೊಂಡೆ ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೆ ನಮ್ಮನ್ನು ಅರ್ಧ ನೀರಿನಲ್ಲಿ ಮುಳುಗಿಸಿ ಅರ್ಧ ಜೀವ ಮಾಡಿದಂತಾಗಿದೆ, ಪುನರ್ವಸತಿ ಮಾಡಿ 45 ವರ್ಷ ಕಳೆದರೂ ಇನ್ನೂ ಸುಧಾರಣೆ ಇಲ್ಲದೇ ಯಾವುದೇ ಉದ್ಯೋಗವಿಲ್ಲದೆ ಕೃಷಿ ಜಮೀನುಗಳಿದ್ದರೂನೀರಿಲ್ಲದೆ ಕೃಷಿ ಮಾಡಲು ಬಾರದಂತ ಪರಿಸ್ಥಿತಿ ನಮ್ಮದು ಅದಕ್ಕಿಂತ ಮೀರಿ ನೀರಿಗೋಸ್ಕರ ಹಾಹಾಕಾರ ಪರಿಸ್ಥಿತಿ, ನೀರಿದ್ದೂ ಕುಡಿಯಲು ನೀರಿಲ್ಲ. ನಾವು ನೀರಿನಲ್ಲಿ ಮುಳುಗಿ ಕತ್ತಲೆಯಲ್ಲಿದ್ದು ದೇಶಕ್ಕೆ ಬೆಳಕನ್ನು ಕೊಟ್ಟೆವು ಆದರೆ ನಮ್ಮನ್ನ ಸರಕಾರ ನಿರ್ಲಕ್ಷಿಸಿದೆ ಇದು ಸರಿನಾ,ನಾವು ಚಿಕ್ಕವರು ಇರುವಾಗ ಒಂದು ಕಥೆಯನ್ನು ಕೇಳಿದ್ದೆವು ಒಂದು ಕಾಗೆ ಬಾಯಾರಿಕೆ ಗೋಸ್ಕರ ನೀರನ್ನು ಹುಡುಕುವಾಗ ಒಂದು ಬಾಣಲೆಯಲ್ಲಿ ಸ್ವಲ್ಪ ನೀರಿತ್ತು ಆ ನೀರನ್ನು ಕುಡಿಯಲು ಅದು ಕಲ್ಲುಗಳನ್ನು ನನ್ನ ಬಾಯಿಂದ ಆ ಬಾಣಲೆಗೆ ತಂದು ಹಾಕಿ ನೀರು ಮೇಲಕ್ಕೆ ಬಂದಾಗ ತನ್ನ ಬಾಯಾರಿಕೆಯನ್ನು ನೀಗಿಸಿತ್ತು ಅದೇ ರೀತಿ ಜಗತ್ತಿಗೆ ನೀರು ಬೆಳಕು ಕೊಡಲು ಹೋಗಿ ನಮ್ಮನ್ನು ಆಣೆಕಟ್ಟಿನಲ್ಲಿ ಮುಳುಗಿಸಲಾಯಿತು. 3 ವರ್ಷ ಆದರೂ ಇನ್ನೂ ತನಕ ಜಲಜೀವನ್ ಮಿಷನ್ ಕೆಲಸ ಮುಗಿಯದು ಯಾರಿಗಾದರೂ ಕೃಷಿ ಭೂಮಿಯಲ್ಲಿ ಅಣ್ಣ ತಮ್ಮ ಪಾಲುದಾರ ರಾಗಬೇಕಾದರೆ ಹಿಸಾ ಪೋಡಿ ಸರ್ವೆ ಮಾಡಬೇಕಾದರೂ ನೋಟ್ ಫೈ ಕಿ ಬರ್ತಾ ಇದೆ ಎಷ್ಟೋ ಸಲ ಎಲ್ಲರ ಗಮನಕ್ಕೆ ತಂದರೂ ಕೂಡ ಜನಪ್ರತಿನಿದಿಗಳು ಮತ್ತು ಅಧಿಕಾರಿಗಳು ಸರಕಾರ ಯಾರು ಕೂಡ ಸ್ಪಂದಿಸುತ್ತಿಲ್ಲ ಇದರಿಂದಾಗಿ ಜಮೀನು ಮಾರಾಟ ಮಾಡಲು ಆಗುತ್ತಿಲ್ಲ ಮೊದಲು ಸಣ್ಣ ಇರುವ ಕುಟುಂಬ ಈಗ ದೊಡ್ಡದಾಗಿರುವ ಕುಟುಂಬವಾಗಿದೆ ಇಲ್ಲಿ ಸಣ್ಣ ಕೈಗಾರಿಕೆ ಉದ್ಯಮಕ್ಕೆ 19 ಎಕ್ಕರೆ ಜಮೀನಿದೆ ಆದರೆ ಯಾವ ಪ್ರಯೋಜನವೂ ಇಲ್ಲ ರಾಮನಗರ ಒಂದು ಪ್ರಮುಖ ಕೇಂದ್ರ ಆಗಿದೆ ಇಲ್ಲಿ ಒಂದು ದೊಡ್ಡದೊಂದು ಇಂಡಸ್ಟ್ರಿಯಲ್ ಮಾಡಿದರೆ ಒಂದು ಸಾವಿರ ಜನಕ್ಕೆ ಉದ್ಯೋಗ ದೊರಕುವುದು ಆದರೆ ಮಾಡೋದಿಲ್ಲ ಇದು ಸರಕಾರ ನಮಗೆ ಮಾಡಿದ ದ್ರೋಹ ಈ ಕ್ಷೇತ್ರದಲ್ಲಿ 45 ವರ್ಷದಿಂದ ಅಳುತ್ತಿರುವ ಶಾಸಕರಾದ ಆರ್ ವಿ ದೇಶಪಾಂಡೆ ಅವರೇ ಇದಕ್ಕೆ ಹೊಣೆ ಇವರು ಎಷ್ಟೇ ವರ್ಷ ಮಂತ್ರಿಗಳಾದರು ಈಗ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರು ಅವರು ನಮ್ಮ ಜಮೀನಿನ ಸಮಸ್ಯೆಯನ್ನು ಬಗೆಹರಿಸಬಹುದಿತ್ತು ಮತ್ತು ನೀರಿನ ಸಮಸ್ಯೆಯನ್ನು ಬಗೆಹರಿಸಬಹುದಿತ್ತು ಜಲ ಜೀವನ ಮಿಷನ್ 28 ಕೋಟಿ ರೂಪಾಯಿ ಕೇಂದ್ರ ಸರಕಾರದಿಂದ ಬಂದಿದ್ದು ನರೇಂದ್ರ ಮೋದಿಜಿ ಅವರ ಸ್ಕೀಮ್ ಆಗಿದೆ ಅದರಲ್ಲಿ ಶಾಸಕರು ಕೂಡ ತಮ್ಮ ಸರ್ಕಾರದಿಂದ ಸ್ವಲ್ಪ ಹಣವನ್ನು ಬಿಡುಗಡೆ ಮಾಡಬಹುದಿತ್ತು .

ಆದರೆ ಅವರು ನಮ್ಮನ್ನ ನಿರ್ಲಕ್ಷಿಸುವುದೇ ಅವರ ಉದ್ದೇಶವಾಗಿದೆ ಕಾಳಿ ನದಿಯಿಂದ ದಾಂಡೇಲಿ ಹಳಿಯಾಳ ಅಳ್ನಾವರ ಗಳಿಗೆ ನೀರು ಹೋಗುತ್ತೆಆದರೆ ನಮಗೆ ಇಲ್ಲ ರಾಮನಗರ ಜಗಲಬೆಟ ಅಸು ತರಬಹುದಿತ್ತು ಆದರೆ ಅವರು ತರುವುದಿಲ್ಲ 45 ವರ್ಷದಿಂದ ಇರುವ ಹಳೆಯ ಪೈಪ್ ಲೈನ್ ಸರಿ ಮಾಡಬಹುದಿತ್ತು ಇವರು ತಮ್ಮ ಸ್ವಾರ್ಥಕ್ಕೋಸ್ಕರ ರಾಜಕಾರಣ ಮಾಡ್ತಾ ಇದ್ದಾರೆ ಜನರ ಸಮಸ್ಯೆಗೆ ಸ್ಪಂದಿಸೋಕಲ್ಲ ಆದಕಾರಣಕ್ಕೆ ಜೋಯಿಡಾ ತಾಲೂಕಿಗೆ ಹಿಂದುಳಿದ ತಾಲೂಕು ಬಿರುದು ಕೊಟ್ಟಿರುವುದು ಶಾಸಕರ ಆಶೀರ್ವಾದದಿಂದ ಎಂದು ಹೇಳಿಕೆ ನೀಡಿದ್ದಾರೆ.
ಭಾರತೀಯ ಜನತಾ ಪಕ್ಷ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು ಗಿರೀಶ್ R ಗೋಸಾವಿ