ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯ ನಗರಿಯ ಶ್ರೀ ಮಹಾಗಣಪತಿ ದೇವರ ವಾರ್ಷಿಕೋತ್ಸವ ದಿನಾಂಕ:22-03-2026 ರ ರವಿವಾರದಂದು ನಡೆಯಲಿದೆ. ವಾರ್ಷಿಕೋತ್ಸವದ ನಿಮಿತ್ತ ಮಧ್ಯಾಹ್ನ 12.30 ಗಂಟೆಗೆ ಶ್ರೀ ಮಹಾಗಣಪತಿ ದೇವರ ಮಹಾಪೂಜೆ,ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುವುದು.

ರಾತ್ರಿ 8:30 ಗಂಟೆಗೆ ಸವಾಲ್ ಕಾರ್ಯಕ್ರಮ ನಡೆಯಲಿದೆ. ಭಕ್ತರ ವಿಶೇಷ ಮನರಂಜನೆಗಾಗಿ ನಗರಿಯ ಕಲಾವಿದರಿಂದ ಕೆರಳಿತು ಸರ್ಪ ಅಳಿಯಿತು ದರ್ಪ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕಾರ್ಯಕ್ರಮದ ಸಂಘಟಕರು ವಿನಂತಿಸಿಕೊಂಡಿದ್ದಾರೆ.