ಸುದ್ದಿ ಕನ್ನಡ ವಾರ್ತೆ

ಮುಂಡಗೋಡ:ತಾಲೂಕಿನ ಮಳಗಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ, ಸಂಸದರ ಶಿಫಾರಸಿನ ಮೇರೆಗೆ,ಕೇಂದ್ರ ಸರ್ಕಾರದ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಯಾದ ONGCಯ CSR ನಿಧಿಯಡಿ ಜನಶ್ರೀಧಾನ್ ಫೌಂಡೇಶನ್ ವತಿಯಿಂದ ಮಳಗಿಯ ಈ ಶಾಲೆಗೆ ಒದಗಿಸಲಾದ ಸ್ಮಾರ್ಟ್ ಬೋರ್ಡ್ ಹಾಗೂ 5 ಕಿ.ವ್ಯಾ. (kW) ಸೌರ ವಿದ್ಯುತ್ ಉಪಕರಣಗಳನ್ನು ಲೋಕಾರ್ಪಣೆ ಮಾಡಿ, ಮುಂಡಗೋಡು ತಾಲ್ಲೂಕಿನ ಆಯ್ದ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಶಿಕ್ಷಾ ಟ್ಯಾಬ್‌’ಗಳನ್ನು ಉತ್ತರಕನ್ನಡ ಜಿಲ್ಲೆಯ ಮಾನ್ಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಜನಶ್ರೀಧಾನ್ ಫೌಂಡೇಶನ್‌ನ ಅಧಿಕಾರಿಗಳು, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಲ್ ಟಿ ಪಾಟೀಲ್, ಮಂಜುನಾಥ ಪಾಟೀಲ್,ಅಶೋಕ ಚಲವಾದಿ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.