ಸುದ್ದಿ ಕನ್ನಡ ವಾರ್ತೆ

. ಜೋಯಿಡಾ ತಾಲೂಕಿನ ರಾಮನಗರದ ಕಂದಾಯ ಇಲಾಖೆ ಯ ಗ್ರಾಮ ಲೆಕ್ಕಾಧಿಕಾರಿ ಸಂತೋಷ ಮ್ಯಾಗೇರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇಂದು ಬೆಳಿಗ್ಗೆ 11ಘಂಟೆ ಸುಮಾರಿಗೆ ಲೋಕಾಯುಕ್ತ ಅಧಿಕಾರಿ ಗಳು ರಾಮನಗರ ದಲ್ಲಿ ನಡೆಸಿದ ಕಾರ್ಯಾಚರಣೆ ಯಲ್ಲಿ ಸಂತೋಷ ಮ್ಯಾಗೇರಿ ಹಣ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ, ಎಂದು ತಿಳಿದುಬಂದಿದೆ. ಸಂದೇಶ ಶರತ್ಚಂದ್ರ ಗುರ್ಜರ್ ಅವರು ತಮ್ಮ ಕೆಲಸಕ್ಕೆ ಕಂದಾಯ ಇಲಾಖೆಯ ಸಂತೋಷ ಮ್ಯಾಗೇರಿ ಅವರನ್ನು ಕಂಡು ಮಾತನಾಡಿದ್ದರು, ಆದರೆ ಕೆಲಸ ಮಾಡಿ ಕೊಡಲು ಮ್ಯಾಗೇರಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದರೆನ್ನಲಾಗಿದೆ ಆಗ ಸಂದೇಶ ಗುರ್ಜರ್ ಅವರು ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ವಿವರಿಸಿ, ಇಂದು ಬೆಳಿಗ್ಗೆ ವೇಳೆಯನ್ನು ನಿಗದಿ ಮಾಡಿದ್ದರು, ಅದರಂತೆಲೋಕಾಯುಕ್ತಕಾರ್ಯಾಚರಣೆಯಲ್ಲಿ ಸಂತೋಷ ಮ್ಯಾಗೇರಿ ಬಲೆಗೆ ಬಿದ್ದಿದ್ದು ತನಿಖೆ ನಡೆದಿದೆ.