ಸುದ್ದಿ ಕನ್ನಡ ವಾರ್ತೆ

ಹೆಗ್ಗಾರ ದೇವಸ್ಥಾನ ದಲ್ಲಿ ನಾದಾಮೃತ ಸಂಗೀತ ಈ ವರ್ಷದ ಯುಗಾದಿಗೆ ನಾದ ವರ್ಷಿಣಿ ಟ್ರಸ್ಟ್ ಮರಡಾ ಗುಂದ ಇವರಿಂದ ದಿನಾಂಕ 19 ರಂದು ಅಂಕೋಲಾ ತಾಲೂಕಿನ ಹೇಗ್ಗಾರಿ ನ ಬಲಮುರಿ ಗಣಪತಿ ದೇವಸ್ಥಾನ ದ ಆವಾರ ದಲ್ಲಿ ಮೊದಲ ಬಾರಿಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ.

19 ರಂದು ಮದ್ಯಾಹ್ನ 4 ಗಂಟೆ ಯಿಂದ ವಿವಿಧ ಕಾರ್ಯಕ್ರಮ ಗಳು ನಡೆಯಲಿದೆ. ಮೊದಲು ಮದ್ಯಾಹ್ನ 4ಘಂಟೆ ಗೆ ಧರ್ಮ ಸಭೆ ನಡೆಯಲಿದೆ ವೆ!!ವಿಶ್ವೇಶ್ವರ ಭಟ್ ಹೆಗ್ಗಾರ ವೆ!!ಡಾ!ವಿಗ್ನೇಶ್ವರ ಭಟ್, ಮುಖ್ಯಸ್ಥರು ಋಷಿ ಕುಲo ಅಂತರಾಷ್ಟ್ರೀಯ ವಿದ್ಯಾ ಸಂಸ್ಥೆ ಯಲ್ಲಾಪುರ ಮತ್ತು ಗಣ್ಯರು ಧರ್ಮ ಸಭೆಯಲ್ಲಿ ಪಾಲ್ಗೊಳ್ಳುವರು, ಹೆಗ್ಗಾರ ಮಹಿಳಾ ಮಂಡಳಿ ಯವರಿಂದ ಭಜನೆ ಗಳು ನಾಧ ವರ್ಷಿಣಿ ಸಂಸ್ಥೆಯ ಅಧ್ಯಕ್ಷ ಸುಧಾಮ ದಾನಗೇರಿ ಅವರಿಂದ ಸಂಗೀತ ಕಾರ್ಯಕ್ರಮ ನಂತರ ಶಿರಶಿಯ ವಿಧೂಷಿ ರೇಖಾ ದಿನೇಶ ಹೆಗಡೆ ಇವರಿಂದ ಭಕ್ತಿಗೀತೆ ಮತ್ತು ಸಂಗೀತ ಕಾರ್ಯಕ್ರಮ, ರಾತ್ರಿ 9 ಘಂಟೆ ಯಿಂದ ಯಕ್ಷಗಾನ ತಾಳ ಮದ್ದಳೆ, ಸೀತಾ ಪಹಾರ, ನಡೆಯಲಿದೆ. ಈ ಎಲ್ಲ ಕಾರ್ಯಕ್ರಮ ಗಳಿಗೆ ನಾದ ವರ್ಷಿಣಿ ಟ್ರಸ್ಟ್ ಅಧ್ಯಕ್ಷ ಸುಧಾಮ ದಾನಗೇರಿ ಮತ್ತು ಹೆಗ್ಗಾರಿನ ನಾಗರಿಕರು ಆಮಂತ್ರಿಸಿದ್ದಾರೆ. ಇಲ್ಲಿನ ಅರುಣೋದಯ ಯುವಕ ಮಂಡಳ ಮತ್ತು ಕಸ್ತೂರಭಾ ಯುವತಿ ಮಂಡಳ ದ ಸಹಕಾರದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ನಾದ ವರ್ಷಿಣಿ ಟ್ರಸ್ಟ್ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.