ಸುದ್ದಿ ಕನ್ನಡ ವಾರ್ತೆ
ಭಟ್ಕಳ: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಹಾಗೂ ನಟ ಬಿ.ಎಂ. ಗಿರಿರಾಜ್ ಅವರ ಹೊಸ ಕನ್ನಡ ಸಿನಿಮಾ ‘ಮರ್ಗೋಸ ಮಹಲ್’ ಚಿತ್ರದ ಚಿತ್ರೀಕರಣ ಭಟ್ಕಳ ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ನಡೆಯಿತು.
ಕಳೆದ ಎರಡು-ಮೂರು ದಿನಗಳಿಂದ ಸಿರ್ಸಿ, ಹೊನ್ನಾವರ, ಸಿದ್ದಾಪುರ ಹಾಗೂ ಗೇರುಸೊಪ್ಪ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿದ ಚಿತ್ರತಂಡವು ನಿನ್ನೆ ಸಂಜೆ ಭಟ್ಕಳಕ್ಕೆ ಆಗಮಿಸಿತು.
ಮುರ್ಡೇಶ್ವರದ ಮಠದ
ಹಿತ್ತಲು, ಬಸ್ತಿ ಪ್ರದೇಶ, ಭಟ್ಕಳ ನಗರದ ಹೈವೇ, ಬಂದರ್ ಹಾಗೂ ಸೋಡಿಗದ್ದೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತಡರಾತ್ರಿ ವರೆಗೆ ಶೂಟಿಂಗ್ ನಡೆಸಲಾಯಿತು.
ಭಟ್ಕಳ ತಾಲೂಕಿನ ಬೆಳ್ಳೆ ಗ್ರಾಮದ ಮಹದೇವ್ ಮೊಗೇರ ಅವರ ಪುತ್ರರಾಗಿರುವ ಬಿ.ಎಂ. ಗಿರಿರಾಜ್ ಅವರು ಈ ಹಿಂದೆ ಮೈತ್ರಿ, ಕನ್ನಡಿಗ, ಜಟ್ಟ, ರಾಮರಸದ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದು, ಮಾರ್ಕ್, ಲ್ಯಾಂಡ್ ಲಾರ್ಡ್, ಲವ್ ಮೊಬೈಲ್, ಅಲ್ಪಾ, ಬ್ಯಾಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರಮುಖ
ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರದ ಸಹ ನಿರ್ದೇಶಕರಾಗಿ ಕಳೆದ ವರ್ಷದ ಸೂಪರ್ ಹಿಟ್ ಬ್ಯಾಟ್ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದ ಭಟ್ಕಳದ ಜಯ್ ಡಿ ಭಟ್ಕಳ ಕಾರ್ಯನಿರ್ವಹಿಸುತ್ತಿದ್ದಾರೆ.
ಚಿತ್ರೀಕರಣದ ವೇಳೆ ಚಿತ್ರತಂಡವು ಭಟ್ಕಳದ ಪ್ರಸಿದ್ಧ ಫಿಶ್ ಹೋಟೆಲ್ ‘ಕರಾವಳಿ ಹೋಟೆಲ್’ಗೆ ಭೇಟಿ ನೀಡಿ ಸ್ಥಳೀಯ ಆಹಾರವನ್ನು ಸವಿದು ಸಂತೋಷ ವ್ಯಕ್ತಪಡಿಸಿತು. ಬಳಿಕ ಚಿತ್ರತಂಡ ಮುಂದಿನ ಚಿತ್ರೀಕರಣಕ್ಕಾಗಿ ಭಟ್ಕಳದಿಂದ ತೆರಳಿತು.
