ಸುದ್ದಿ ಕನ್ನಡ ವಾರ್ತೆ
ಭಟ್ಕಳ: ಕಳೆದ ಸುಮಾರು ಎರಡು ವರ್ಷಗಳಿಂದ ಎಲ್ಲಿಯೂ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಳ್ಳದ ಮಾಜಿ ಕೇಂದ್ರ ಸಚಿವ ಉತ್ತರ ಕನ್ನಡ ಜಿಲ್ಲೆಯ ದಾಖಲೆಯ ಚುನಾವಣೆ ಗೆದ್ದ ಅನಂತಕುಮಾರ ಹೆಗಡೆ ಇನ್ನೇನು ಕೆಲವೇ ಗಂಟೆಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎನ್ನುವಾಗಲೇ ಹಿಂದೂ ಕಾರ್ಯಕರ್ತರಲ್ಲಿ ಹಾಗೂ ಅವರ ಬೆಂಬಲಿಗರಲ್ಲಿ ನವ ಚೈತನ್ಯ ಮೂಡಿದ್ದು ಹಳ್ಳಿ ಹಳ್ಳಿಗಳಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದೆ.
ಅತ್ಯಂತ ಕಠಿಣ ನಿಲುವಿನ ಅಷ್ಟೇ ಗಟ್ಟಿ ನಿಲುವಿನ ವ್ಯಕ್ತಿ ಅನಂತಕುಮಾರ್ ಹೆಗಡೆ ಎನ್ನುವುದು ಎಲ್ಲರಿಗೂ ಗೊತ್ತು. ರಾಜಕಾರಣದಿಂದ ಹೊರಗುಳಿಯುತ್ತೇನೆ ಎಂದು ಘೋಷಣೆ ಮಾಡಿ ಹೊರಟ ಅವರನ್ನು ಮರು ಮಾತನಾಡಿಸಲು ಯಾರಿಗೂ ಸಾಧ್ಯವಿಲ್ಲ ಎನ್ನುವುದೂ ಗೊತ್ತು. ಆದರೂ ಕೂಡಾ ಹಿಂದುತ್ವವನ್ನೇ ನಂಬಿಕೊAಡು ಬಂದಿದ್ದು ಹಿಂದುತ್ವದ ಪ್ರತಿಪಾದಕರಾದ ಅವರನ್ನು ಹಿಂದೂ ಸಂಘಟನೆಗಳು, ಆರ್.ಎಸ್.ಎಸ್. ಪ್ರಮುಖರು ಸಂಪರ್ಕಿಸಿದಾಗ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಬರುವುದಕ್ಕೆ ಒಪ್ಪಿಗೆ ನೀಡಿರುವುದು ಜಿಲ್ಲೆಯಲ್ಲಿ ಮತ್ತೊಮ್ಮೆ ರಾಜಕೀಯ ಸಂಚಲನ ಮೂಡುವುದಕ್ಕೆ ಕಾರಣವಾಗಿದೆ ಎಂದರೆ ಅತಿಶಯವಾಲಾರದು.
ಕಳೆದ ಲೋಕ ಸಭಾ ಚುನಾವಣೆ ಇರಬಹುದು ನಂತರದ ಬೆಳವಣಿಗೆ ಇರಬಹುದು ರಾಜ್ಯದಲ್ಲಿ ಬಿ.ಜೆ.ಪಿ.ಗೆ ಸ್ವಲ್ಪ ಹಿನ್ನೆಡೆಯೆಂದೇ ಹೇಳಬೇಕು. ಅನೇಕ ಹಗರಣಗಳು, ಮೂಡಾ, ಲಂಚಾವತಾರದ ನಡುವೆಯೂ ಮುಖ್ಯ ಮಂತ್ರಿಗಳಿAದ ರಾಜೀನಾಮೆ ಪಡೆಯುವುದಕ್ಕೆ ಸಮರ್ಥ ಹೋರಾಟ ಮಾಡಲು ಕೂಡಾ ಪಕ್ಷ ವಿಫಲವಾಗಿದೆ ಎನ್ನುವ ಭಾವನೆ ಎಲ್ಲೋ ಒಂದು ಕಡೆ ಮೂಡಿದ್ದರೆ, ಕಟ್ಟರ್ ಹಿಂದೂವಾದಿಗಳಾದ ಬಸವರಾಜ ಪಾಟೀಲ್ ಯತ್ನಾಳ್, ಕೆ.ಎಸ್. ಈಶ್ವಪ್ಪನಂತವರು ಪಕ್ಷದಿಂದ ಹೊರಗುಳಿದಿರುವಾಗ ಪಕ್ಷದ ವರ್ಚಸ್ಸನ್ನು ಎತ್ತರಕ್ಕೆ ಏರಿಸಬಲ್ಲ, ಮುಖ್ಯ ಮಂತ್ರಿ ಸಿದ್ಧರಾಮಯ್ಯನವರಿಗೆ ಏಟಿಗೆ ಎದಿರೇಟು ಕೊಡಬಲ್ಲ ಒಬ್ಬ ನಾಯಕನ ಅಗತ್ಯ ರಾಜ್ಯ ಬಿ.ಜೆ.ಪಿ. ಎದುರಿಸುತ್ತಿದೆ ಎನ್ನುವುದು ಎಲ್ಲರ ಅನಿಸಿಕೆಯಾಗಿದೆ. ಅದಕ್ಕಾಗಿಯೇ ಈಗಾಗಲೇ ಸಿದ್ಧತೆಗಳು ನಡೆದಿದೆ. ಅಂತಹ ಒಬ್ಬ ವ್ಯಕ್ತಿಯಿದ್ದರೆ ಅದು ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮಾತ್ರ ಎನ್ನುವುದನ್ನು ರಾಷ್ಟç ಮಟ್ಟದಲ್ಲಿಯೂ ಮನವರಿಕೆಯಾಗಿದ್ದು ಅವರನ್ನು ರಾಜ್ಯ ರಾಜಕಾರಣಕ್ಕೆ ತರಬೇಕು ಎನ್ನುವ ಮಾತು ಎಲ್ಲೆಡೆ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಮಾ.೮ರಂದು ಹಿಂದು ಸಂಗಮ ಕಾರ್ಯಕ್ರಮದ ಮೂಲಕ ಅನಂತಕುಮಾರ್ ಹೆಗಡೆ ರಾಜಕೀಯಕ್ಕೆ ರಿ-ಎಂಟ್ರಿ ಹೊಡೆಯುತ್ತಾರೋ? ಹಿಂದೂ ಸಂಘಟನೆಗಷ್ಟೇ ಸೀಮಿತರಾಗುತ್ತಾರೊ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಭಟ್ಕಳದಿಂದಲೇ ತಮ್ಮ ರಾಜಕೀಯದ ಇನ್ನಿಂಗ್ಸ್ ಆರಂಭಿಸಿದ್ದ ಅನಂತಕುಮಾರ ಹೆಗಡೆ ಜಿಲ್ಲೆಯಲ್ಲಿ ಮಾಡಿದ ದಾಖಲೆಯು ಭಟ್ಕಳದ ಜನತೆಗೆ ಹೆಮ್ಮೆಯ ವಿಚಾರವಾದರೆ ಇವ ನಮ್ಮವ ಎನ್ನುವ ಭಾವನೆ ಕೂಡಾ ಇಲ್ಲಿಯ ಜನತೆಯದ್ದು. ಮೂರು ದಶಕಗಳಿಗೂ ಹೆಚ್ಚು ಕಾಲ ಕೇಂದ್ರ ಸರಕಾರದಲ್ಲಿ ಇದ್ದುಕೊಂಡು ರಾಷ್ಟç ನಿರ್ಮಾಣದ ಕೆಲಸ ಮಾಡಿದ್ದ ಅನಂತಕುಮಾರ್ ಹೆಗಡೆ ರಾಜ್ಯ ರಾಜಕಾರಣಕ್ಕೆ ಬರಬೇಕು ಎನ್ನುವುದು ಹಲವರ ಅಪೇಕ್ಷೆಯಾಗಿತ್ತು ಕೂಡಾ ಆದರೆ ಕಾಲ ಕೂಡಿ ಬಂದಿಲ್ಲ. ತಮ್ಮದೇ ಕೆಲವು ವ್ಯತ್ಯಾಸಗಳಿಂದ ಅನಂತಕುಮಾರ್ ಹೆಗಡೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿಕೊಳ್ಳುವ ಮೂಲಕ ರಾಜಕೀಯದಿಂದಲೇ ದೂರ ಸರಿದಿದ್ದಾರೆ. ಇದು ಅವರ ಬೆಂಬಲಿಗರಿಗನೇಕರಿಗೆ ನುಂಗಲಾರದ ತುತ್ತಾಗಿದ್ದರೆ, ರಾಜ್ಯ ರಾಜಕೀಯ ಪರಿಸ್ಥಿತಿಯಲ್ಲಿ ಅವರ ಅವಶ್ಯಕತೆ ಇದೆ ಎನ್ನುವುದನ್ನು ಅವರ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ.
೧೯೯೩ರಲ್ಲಿ ಭಟ್ಕಳದಲ್ಲಿ ನಡೆದ ಸುಧೀರ್ಘ ಕೋಮು ಗಲಭೆಯಲ್ಲಿ ಹೋರಾಟ ಮಾಡಿ ಹಿಂದೂಗಳ ರಕ್ಷಣೆಗೆ ನಿಂತಿದ್ದರೆ ಅದು ಅನಂತಕುಮಾರ ಹೆಗಡೆ ಎನ್ನುವುದನ್ನು ಭಟ್ಕಳದ ಜನತೆ ಇಂದು ಘಂಟಾಘೋಷವಾಗಿ ಹೇಳುತ್ತಾರೆ. ಅಂದು ಹಿಂದೂಗಳಿಗೆ ಅನ್ಯಾಯವಾದಾಗ ಸೆಟೆದು ನಿಂತ ಯುವಕ ನಂತರ ಜಿಲ್ಲೆಯ ಸಂಸದರಾಗುತ್ತಾರೆ ಎನ್ನುವ ಕನಸು ಅವರು ಮಾತ್ರವಲ್ಲ ಜಿಲ್ಲೆಯ ಯಾರೂ ಕೂಡಾ ಕಂಡಿರಲಿಲ್ಲ. ಆದರೆ ಸೋಲಿಲ್ಲದ ಸರದಾರನಂತೆ ಮೂರು ದಶಕಗಳ ಕಾಲ ಜಿಲ್ಲೆಯ ಜನರ ವಿಶ್ವಾಸ ಗಳಿಸಿ ಸಂಸದರಾಗಿ, ಕೇಂದ್ರ ಸಚಿವರಾಗಿ ರಾಜಕೀಯದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಸಿದ್ದ ಅನಂತಕುಮಾರ್ ಹೆಗಡೆ ಅವರಿಗೆ ರಾಜಕೀಯದ ಹೆಬ್ಬಾಗಲು ಭಟ್ಕಳ ಎನ್ನುವುದನ್ನು ಯಾರೂ ಅಲ್ಲಗಳೆಯಲಾರದು. ಕಳೆದ ೩೫ ವರ್ಷಗಳ ಹಿಂದೆ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕರಾಗಿ ಭಾಷಣ ಮಾಡಿದ ಜಾಗದಲ್ಲೇ ಅವರು ಮಾರ್ಚ ೮ ರಂದು ನಗರ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣೆ ಮಾಡಲಿದ್ದಾರೆ. ತಮ್ಮ ಭಾಷಣವನ್ನು ಕೇವಲ ಹಿಂದುತ್ವಕ್ಕಾಗಿ ಮಾತ್ರ ಮೀಸಲಿಡುತ್ತಾರೋ? ರಾಜಕೀಯ ಮರು ಪ್ರವೇಶದ ಕುರಿತು ಸುಳಿವು ನೀಡುತ್ತಾರೋ ಕಾದು ನೋಡಬೇಕಾಗಿದೆ.
