ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಇಲ್ಲಿನ ಪ್ರೇಂಡ್ಸ್ ಕ್ಲಬ್ ಸಮಿತಿಯ ವತಿಯಿಂದ ಆಯೋಜಿಸಲಾದ ಗಾಂಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ತಂಡಗಳ (ಜಿಪಿಎಲ್) ಪಂದ್ಯಾವಳಿಯು ಮಾರ್ಚ್ 6 ರಿಂದ ಆರಂಭವಾಗಿದ್ದು ಯಶಸ್ವಿಯಾಗಿ ನಡೆಯುತ್ತಿದೆ.

ಪಾಪ್ಭಾಗವಹಿಸಿದ ಎಲ್ಲಾ ಕ್ರಿಕೆಟ್ ತಂಡದ ಆಟಗಾರರು ಕ್ರೀಡಾಮನೋಭಾವನೆಯಿಂದ ಆಟವಾಡುತ್ತಿದ್ದು,ಸಂಘಟಕರು ಸಹ ಆಟಗಾರರಿಗೆ ಉತ್ತಮವಾದ ವ್ಯವಸ್ಥೆಯನ್ನು ಮಾಡಿರುತ್ತಾರೆ. ಇಲ್ಲಿನ, ಅಕ್ಕಪಕ್ಕದ ಊರಿನ ಕ್ರೀಡಾಪ್ರೇಮಿಗಳು ಆಟದ ಆನಂದವನ್ನು ಅನುಭವಿಸುತಿದ್ದಾರೆ.