ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದ ಕುಣುಬಿ ಗಳು ಬಣ್ಣದ ಹೋಳಿ ಆಡುವುದಿಲ್ಲ, ಬದಲು ಅವರ ಸಾಂಪ್ರದಾಯ ದಂತೆ ಭಲೇ ಭಲೇ ಭಲೇ ಸೇಬೈ ಎಂಬ ಅವರದ್ದೇ ಆದ ಮಂತ್ರ ಹಾಡುತ್ತಾ ಮೈಗೆ ಸೇಡಿ ಮಣ್ಣು ಬಡಿದು, ಹೂವುಗಳಿಂದ ಶೃಂಗಾರ ಮಾಡಿ ಮತ್ತು ಗೊಂಡೆ ಗಿಡದ ಎಲೆಯ ಮೇಲೆ ಸೆಗಣಿ ಕೈಯಲ್ಲಿ ಹಿಡಿದು ಹಾಡುತ್ತಾ , ಕುಣಿಯುತ್ತಾ ವಿಶಿಷ್ಟ ರೀತಿಯಲ್ಲಿ ಬಣ್ಣದ ಹೋಳಿ ಆಚರಿಸುತ್ತಾರೆ.
ಕುಣಬಿ ಗಳಲ್ಲಿ ‘ಧುಲ್ಲುಪ” ಅಂದರೆ ಬಣ್ಣದ ಹೋಳಿ, ಎಲ್ಲ ಕುಣಬಿ ಗ್ರಾಮಗಳಲ್ಲಿ ‘ಧುಲ್ಲುಪ” ಇರುತ್ತದೆ ಅವರು ಬಣ್ಣದ ಹೋಳಿ ಆಡುವುದಿಲ್ಲ. ಆಡಲೂ ಬಾರದು ಎಂಬ ನೀಯಮ ಕುಣಬಿ ಗಳಲ್ಲಿ ಅನಾದಿ ಕಾಲದಿಂದ ಇದೆ.ಕುಣಬಿ ಗಳಲ್ಲಿ ಧುಲ್ಲುಪ ಇದು ಸಾಂಪ್ರದಾಯಿಕ ಹಬ್ಬ. ಹೋಳಿ ಆದ ಮೂರನೇ ದಿನ ಆಡಲಾಗುತ್ತದೆ. ಧುಲ್ಲುಪ ಹೆಸರಿನ ಮರ ಕಾಡಿನ ರಾಯ್ ಅಂದರೆ ದೇವರ ಕಾಡು ಅಥವಾ ದೇವರ ಜಾಗೆಯ ಮೇಲೆ ಇರುತ್ತದೆ.
ಇದರ ಕೆಂಪು ಹೂವು ಮೊದಲ ದಿನ ಸಂಗ್ರಹಿಸಿ ಮಾಲೆ ಮಾಡಲಾಗುತ್ತದೆ. ಧುಲ್ಲುಪ ಆಡುವವರು ಮೈಗೆ ಸೇಡಿ ಮಣ್ಣು ಸವರಿ ಕೊಂಡು ಮುಖಕ್ಕೆ ಕಪ್ಪು ಬಣ್ಣದ ಮೀಸೆ ತೆಗೆದು, ತಲೆಗೆ ಟಾವೆಲ್ ಕಟ್ಟಿ. ಮೊದಲ ದಿನ ತಂದ ಧುಲ್ಲುಪ ಹೂವಿನ ಮಾಲೆ ಹಾಕಲಾಗುತ್ತದೆ. ಸೊಂಟದ ಸುತ್ತ ನಿಗುಂಡೊ ಗಿಡದ ಎಲೆ ಸುತ್ತಲಾಗುತ್ತದೆ. ಕೈಯಲ್ಲಿ “ನಿಗುಂಡೊ” ಗಿಡದ ಎಲೆಯ ಮೇಲೆ ಸೆಗಣಿ ತೆಗೆದುಕೊಂಡು ಮೊದಲ ಹೋಳಿ ಕಂಬದ ಸುತ್ತ ಸುತ್ತಿ ನಂತರ ಸಿದ್ಧನಾಥ ದೇವರ ಸುತ್ತ, ಭೂಯಿತ್ ದೇವರು, ಕುಲ ದೇವರ ಅಂಗಳದಲ್ಲಿ ಇರುವ ತುಳಸಿ ಕಟ್ಟೆಯ ಸುತ್ತ ಭಲೆ ಭಲೆ ಸೇಬೈ ಎಂದು ಕುಣಿಯಲಾಗುತ್ತದೆ. ಧುಲ್ಲುಪ ತಂಡದ ಸದಸ್ಯರು ಕೈಯಲ್ಲಿ ಇರುವ ಸೇಗಣಿಯನ್ನು ಬೇರೆಯವರ ಮೇಲೆ ಎಸೆದು ಧುಲ್ಲುಪ ಆಡಲಾಗುತ್ತದೆ. ನಂತರ ದೂರದ ಹಳ್ಳಕ್ಕೆ ಹೋಗಿ ಸ್ನಾನ ಮಾಡಿಕೊಂಡು ನಂತರ ಬೇಂಕಿ ಹಾಕಿ ಅದರ ಮೇಲೆ ಹಾರಿ ನಂತರ ದೇವರ ಜಯ ಘೋಷಣೆಗಳು ಮೊಳಗಿಸುತ್ತಾ ಮನೆಗೆ ಬರುತ್ತಾರೆ.
ಮನೆಯಲ್ಲಿ ಯಾರಾದರೂ ಅನಾರೋಗ್ಯ ಗೊಂಡವರು, ಸಣ್ಣ ಮಕ್ಕಳು ಆರಾಮ ಇಲ್ಲದಿದ್ದರೆ ಧುಲ್ಲುಪ ಮಾಂಡನಲ್ಲಿ ಹಾಕಲಾಗುತ್ತದೆ. ಮಾರನೇಯ ವರ್ಷ ದೇವರಿಗೆ ಕಾಯಿ ರೂಪದಲ್ಲಿ ಹರಕೆ ನೀಡಲಾಗುತ್ತದೆ.
ಬೇರೆ ಬೇರೆ ಗ್ರಾಮಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಧುಲ್ಲುಪ ಆಡಲಾಗುತ್ತದೆ. ಒಟ್ಟಾರೆ ಬಣ್ಣ ಆಡೋದಿಲ್ಲ
