ಸುದ್ದಿ ಕನ್ನಡ ವಾರ್ತೆ

ಶಿರಸಿ: ಕೇಂದ್ರ ಸರ್ಕಾರದ ಅತ್ಯಂತ ಪ್ರತಿಷ್ಠಿತ ಮೂಲ ವಿಜ್ಞಾನ ಸಂಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ ಮತ್ತು ರಿಸರ್ಚ (ಐಐಎಸ್ ಆರ್)ನ ಪ್ರವೇಶಾತಿ ನೀಡುವ ಐಎಟಿ ಪರೀಕ್ಷೆಯಲ್ಲಿ ಶಿರಸಿಯ ಚಂದನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕನ್ನಿಕಾ ಭಟ್ಟ, ರಾಷ್ಟ್ರಕ್ಕೆ 685 ರ್ಯಾಂಕ ಗಳಿಸಿ ಸಾಧನೆ ಮಾಡಿದ್ದಾಳೆ.
ಇವಳು ಸಂಪೂರ್ಣವಾಗಿ ಶಿರಸಿಯಲ್ಲಿಯೇ ಓದಿ ಈ ಸಾಧನೆ ಮಾಡಿದ್ದು ದೇಶದ ಏಳು ಪ್ರತಿಷ್ಠಿತ ಐಐಎಸ್ ಆರ್
ಗಳಲ್ಲಿ ಪ್ರವೇಶಾತಿ ಪಡೆಯಲು ಅರ್ಹಳಾಗಿದ್ದಾಳೆ.

ವಿದ್ಯಾರ್ಥಿನಿಯ ಈ ಸಾಧನೆಗೆ ಚಂದನ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಎಂ.ಭಟ್, ಕಾಲೇಜಿನ ಸಂಸ್ಥಾಪಕ ಎಲ್.ಎಂ.ಹೆಗಡೆ, ಕಾಲೇಜಿನ ಉಪಸಮಿತಿಯ ಅಧ್ಯಕ್ಷ ವಿ.ಜಿ.ಜೋಶಿ, ಕಾಲೇಜಿನ ಸಿಇಓ ಸಿ.ಡಿ.ನಾಯ್ಕ, ಪ್ರಮುಖರಾದ ವಿನಯ್ ಜೋಶಿ, ಕಾಲೇಜಿನ ಶಿಕ್ಷಕ ವರ್ಗ, ಪಾಲಕರು ಹಾಗೂ ವಿದ್ಯಾರ್ಥಿಗಳು ಹೆಮ್ಮೆ ಮತ್ತು ಹರ್ಷ ವ್ಯಕ್ತಪಡಿಸಿದ್ದಾರೆ.