ಸುದ್ದಿ ಕನ್ನಡ ವಾರ್ತೆ

ಶಿರಸಿ:ತಾಲೂಕಿನ ಉತ್ಸಾಹಿ ಯುವಕರು ಒಗ್ಗೂಡಿ ಅತ್ಯಂತ ಪರಿಶ್ರಮದಿಂದ ಸಿದ್ಧಪಡಿಸಿರುವ “ಕಾನ್ಧಾರಿ” ಸಾಕ್ಷ್ಯಚಿತ್ರದ ಟೀಸ‌ರ್ ಅನ್ನು ರವಿವಾರ ತಮ್ಮ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಾಕ್ಷ್ಯಚಿತ್ರದ ತಂಡದ ಎಲ್ಲರಿಗೂ ಶುಭವನ್ನು ಕೋರುತ್ತಾ ಉತ್ತರ ಕನ್ನಡ ಜಿಲ್ಲೆಯ ಅಪ್ರತಿಮ ನಿಸರ್ಗ ಸಂಪತ್ತು, ಇಲ್ಲಿನ ಐತಿಹಾಸಿಕ ಹಿನ್ನೆಲೆ ಹಾಗೂ ಅಪರೂಪದ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಮೂಡಿಬಂದಿರುವ ಈ ಚಿತ್ರದ ಟೀಸ‌ರ್ ಅತ್ಯಂತ ಆಕರ್ಷಕವಾಗಿ ಮೂಡಿಬಂದಿದೆ. ನಮ್ಮ ನೆಲದ ಸಂಸ್ಕೃತಿ ಮತ್ತು ಪರಿಸರವನ್ನು ಮುಂದಿನ ಪೀಳಿಗೆಗೆ ದಾಟಿಸುವ ಈ ಯುವಕರ ಸೃಜನಶೀಲ ಪ್ರಯತ್ನ ಹಾಗೂ ಸಾಹಸ ನಿಜಕ್ಕೂ ಮೆಚ್ಚುವಂತದ್ದು. ಜಿಲ್ಲೆಯ ಹಿರಿಮೆಯನ್ನು ಸಾರುವ ಇವರ ಈ ಕಲಾತ್ಮಕ ಪಯಣ ಯಶಸ್ವಿಯಾಗಲಿ ಮತ್ತು “ಕಾನ್ಧಾರಿ” ತಂಡಕ್ಕೆ ಜಯ ಸಿಗಲಿ ಎಂದು ಹಾರೈಸಿದರು.