ಸುದ್ದಿ ಕನ್ನಡ ವಾರ್ತೆ
ಶಿರಸಿ: ಮಾರಿಕಾಂಬಾ ಜಾತ್ರೆಯು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾಗಿದೆ. ಈ ಬಾರಿಯ ಜಾತ್ರಾ ಮಹೋತ್ಸವವು ಫೆ.24 ರಿಂದ ಮಾ.4ರ ವರೆಗೆ ಜಾತ್ರೆ ನಡೆಯಲಿದೆ. ಫೆ.24ರ ರಾತ್ರಿ ದೇವಿಯ ಕಲ್ಯಾಣೋತ್ಸವ ಜರುಗಲಿದ್ದು, 25ರ ಬೆಳಗ್ಗೆ ರಥೋತ್ಸವ ನಡೆಯಲಿದೆ. ನಂತರ 6 ದಿನಗಳ ಕಾಲ ಸೇವಾ ಕಾರ್ಯಗಳು ನಡೆಯಲಿದ್ದು, ಮಾ.4ರಂದು ದೇವಿಯು ನಿರ್ಗಮಿಸಳಿದ್ದಾಳೆ. ಈಗಾಗಲೇ ದೇವಿಯ ರಥೋತ್ಸವಕ್ಕೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳು ಭರದಿಂದ ನಡೆದಿವೆ. ಅಂದಿನ ವಿರಾಟ ನಗರವಾಗಿದ್ದ ಈಗಿನ ಹಾನಗಲ್ಲಿನಲ್ಲಿ ಧರ್ಮರಾಯನು ದೇವಿಯನ್ನು ಆರಧಿಸುತ್ತಿದ್ದನು ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ಚಾಲುಕ್ಯರ ಕಾಲದ ಶಾಸನದಲ್ಲಿ ಕೂಡ ಇದರ ಉಲ್ಲೇಖವಿದೆ,ಹಾನಗಲ್ಲಿನಲ್ಲಿ ಜಾತ್ರೆ ಮುಗಿದ ನಂತರ ಆಭರಣಗಳ ಸಮೇತವಾಗಿ ದೇವಿಯನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಇಟ್ಟಿದ್ದರು. ಅದನ್ನು ಕೆಲವು ಕಳ್ಳರು ಅಪಹರಿಸಿ ಸಿರ್ಸಿಗೆ ತಂದರು. ಆಭರಣಗಳನ್ನು ಹಂಚಿಕೊಂಡ ನಂತರ ಆ ವಿಗ್ರಹವನ್ನು ಪೆಟ್ಟಿಗೆಯಲ್ಲಿಟ್ಟು ಕೆರೆಗೆ ಎಸೆದರು. ಆ ಕೆರೆಯು ಸಿರ್ಸಿಯ ದೇವಿಕೆರೆ ಎಂದು ಹೆಸರಾಗಿದೆ.
ಭಕ್ತನೊಬ್ಬ ಪ್ರತಿ ವರ್ಷ ಚಂದ್ರಗುತ್ತಿಯ ಜಾತ್ರೆಗೆ ಹೋಗುತ್ತಿದ್ದ.
ಆದರೆ ಒಂದು ಬಾರಿ ಅವನನ್ನು ಜನರು ತಡೆದು ಪೀಡಿಸಿದರು. ಅದರಿಂದ ಬೇಸರಗೊಂಡು ಅವನು ಮುಂದಿನ ವರ್ಷ ಜಾತ್ರೆಗೆ ಹೋಗದೇ ಸಿರ್ಸಿಯಲ್ಲಿಯೇ ದೇವಿಯ ಆರಾಧನೆ ಮಾಡಿದನು. ಒಂದು ರಾತ್ರಿ ದೇವಿ ಅವನಿಗೆ “ನಾನು ಮಾರಮ್ಮ, ನಾನು ನಿಮ್ಮ ಊರಿನ ಕೆರೆಯಲ್ಲಿದ್ದೇನೆ. ನನ್ನನ್ನು ಮೇಲೆತ್ತು” ಎಂದು ಹೇಳಿದಂತೆ ಕನಸು ಬಿತ್ತು. ಅವನು ಅದನ್ನು ಆ ಊರಿನ ಪ್ರಮುಖರಿಗೆ ತಿಳಿಸಿದನು. ಅದರಂತೆ ಊರವರು ಕೆರೆಯ ಸುತ್ತ ಸೇರಲಾಗಿ ಭಕ್ತನು ಮೂರು ಸುತ್ತು ಕೆರೆಯನ್ನು ಸುತ್ತಿ ದೇವಿಯನ್ನು ಪ್ರಾರ್ಥಿಸಿದನು. ಕೆರೆಯ ಮೇಲೆ ತೇಲುತ್ತಿರುವ ಪೆಟ್ಟಿಗೆಯು ಕಂಡುಬಂದಿತು. ಅದರಲ್ಲಿನ ವಿಗ್ರಹದ ಭಾಗಗಳನ್ನು ಒಟ್ಟು ಸೇರಿಸಲಾಗಿ ದೇವಿಯ ವಿಗ್ರಹವು ಮೂಡಿಬಂದಿತು.
ಗ್ರಾಮಸ್ಥರು ದೇವಿಯ ವಿಗ್ರಹವನ್ನು ಸಿರ್ಸಿಯಲ್ಲಿ ಸ್ಥಾಪಿಸಲು ಅನುಮತಿ ಕೋರಿ ಸೋಂದಾ ಸಂಸ್ಥಾನದ ಮಹಾರಾಜರನ್ನು ಕೇಳಿದರು. ಅದರಂತೆ ಕ್ರಿ.ಶ. ೧೬೮೮ರಲ್ಲಿ, ಅಂದರೆ ಶಾಲಿವಾಹನ ಶಕೆ ೧೬೧೧ರ ಶುಕ್ಲ ಸಂವತ್ಸರದ ವೈಶಾಖ ಶುದ್ಧ ಅಷ್ಟಮಿಯಂದು, ಮಂಗಳವಾರ ದೇವಿಯನ್ನು ಈಗಿನ ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. 1688 ರಲ್ಲಿ ಸ್ಥಾಪಿತವಾದ ಈ ದೇವಾಲಯದ ದೇವಿಯು ಮಹಿಷಾಸುರನನ್ನು ಸಂಹರಿಸಿದ ದುರ್ಗೆಯ ರೂಪವೆಂದು ನಂಬಲಾಗಿದೆ. ಹಾನಗಲ್‌ನಿಂದ ಬಂದ ಕಳ್ಳರು ದೇವಿಯ ವಿಗ್ರಹವನ್ನು ತಂದು ಕೆರೆಯಲ್ಲಿ ಎಸೆದಿದ್ದಾಗ, ಅಸಾಡಿ ಬಸವ ಎಂಬ ಭಕ್ತನಿಗೆ ಕನಸಿನಲ್ಲಿ ಬಂದು ದೇವಿಯು ತನ್ನನ್ನು ಹೊರತೆಗೆಯಲು ಸೂಚಿಸಿದ ಹಿನ್ನೆಲೆಯಲ್ಲಿ ಈ ಜಾತ್ರೆ ಪ್ರಾರಂಭವಾಯಿತು.
ಶಿರಸಿ ಮಾರಿಕಾಂಬಾ ಜಾತ್ರೆಯ ಇತಿಹಾಸ ಮತ್ತು ಹಿನ್ನೆಲೆ:
ಸ್ಥಾಪನೆ: ಶಿರಸಿಯ ಮಾರಿಕಾಂಬಾ ದೇವಾಲಯವು 1688 ರಲ್ಲಿ ನಿರ್ಮಾಣಗೊಂಡಿತು.
ದೇವಿಯ ಉಗಮ: ಹಾನಗಲ್‌ನಿಂದ ಕಳ್ಳರು ದೇವಿಯ
ವಿಗ್ರಹವನ್ನು ಕದ್ದು ಶಿರಸಿಯ ಕೆರೆಯೊಂದರಲ್ಲಿ ಎಸೆದಿದ್ದರು. ಅಸಾಡಿ ಬಸವ ಎಂಬ ಭಕ್ತನಿಗೆ ದೇವಿಯು ಕನಸಿನಲ್ಲಿ ಬಂದು ದೇವಸ್ಥಾನ ಸ್ಥಾಪಿಸಲು ಸೂಚಿಸಿದ ನಂತರ, 1688 ರಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು.
ವಿಗ್ರಹದ ವಿಶೇಷತೆ: ಸುಮಾರು 7 ಅಡಿ ಎತ್ತರದ, ಎಂಟು ಕೈಗಳನ್ನು ಹೊಂದಿದ ದೇವಿಯು ಹುಲಿಯ ಮೇಲೆ ಕುಳಿತು ಮಹಿಷಾಸುರನನ್ನು ಸಂಹರಿಸುತ್ತಿರುವ ಭೀಕರ ರೂಪದಲ್ಲಿದ್ದಾಳೆ.ಚಪ್ಪರ ಸುಡುವ ಆಚರಣೆ: ಜಾತ್ರೆಯ ಕೊನೆಯಲ್ಲಿ,ದೇವಿಯು ಮಹಿಷಾಸುರನನ್ನು ಸಂಹರಿಸಿ ನಂತರ ತಾನು ಕೂಡ ಪತಿಯೊಂದಿಗೆ ಬೆಂಕಿಯಲ್ಲಿ ಆಹುತಿಯಾಗುವುದನ್ನು ಸಂಕೇತಿಸಲು ಚಪ್ಪರ ಸುಡುವ ಆಚರಣೆ ನಡೆಯುತ್ತದೆ.
ಜಾತ್ರೆಯ ಅವಧಿ: ಪ್ರತಿ 2 ವರ್ಷಕ್ಕೊಮ್ಮೆ (ಸರಿವರ್ಷಗಳಲ್ಲಿ) 10 ದಿನಗಳ ಕಾಲ ಈ ಅದ್ಧೂರಿ ಜಾತ್ರೆ ನಡೆಯುತ್ತದೆ.
ಪ್ರಾಮುಖ್ಯತೆ: ಈ ಜಾತ್ರೆಯಲ್ಲಿ ಲ್ಯಾಟರಿ ಮತ್ತು ಕಾವಿ ಕಲೆಯಿಂದ ಅಲಂಕರಿಸಲ್ಪಟ್ಟ ದೇವಾಲಯದ ಗೋಡೆಗಳು ವಿಶೇಷ.
ಈ ಜಾತ್ರೆಯು ದಕ್ಷಿಣ ಭಾರತದಾದ್ಯಂತ ಭಕ್ತರನ್ನು ಆಕರ್ಷಿಸುತ್ತದೆ ಮತ್ತು ಹರಕೆ ಹೊತ್ತ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬುದು ಜನರ ನಂಬಿಕೆಯಾಗಿದೆ.
