ಸುದ್ದಿ ಕನ್ನಡ ವಾರ್ತೆ
. ಹಳಿಯಾಳ: ಯಲ್ಲಾಪುರ -ಹಳಿಯಾಳ ರಸ್ತೆ ಮಾರ್ಗದ ಭಾಗವತಿ ಸಮೀಪ ಒಂಟಿ ಸಲಗ ಕಾಣಿಸಿಕೊಂಡಿದೆ. ಈ ವೇಳೆ ಬಸ್ ಚಾಲಕ ಎಚ್ಚರಿಕೆಯಿಂದ ವಾಹನವನ್ನು ನಿಲ್ಲಿಸಿ, ಸಲಗ ಕಾಡಿನೊಳಗೆ ತೆರಳಿದ ನಂತರವೇ ಸಂಚಾರ ಮುಂದುವರಿಸಿದ್ದಾರೆ.
ಅದೇ ರೀತಿ, ನಾಲೈದು ದಿನಗಳ ಹಿಂದೆ ಬೊಮ್ಮನಹಳ್ಳಿ-ಅಂಬಿಕಾನಗರ ರಸ್ತೆಯಲ್ಲಿ ಪ್ರವಾಸಿಗರ ವಾಹನ ಹಾಗೂ ಬಸ್ ಮುಂದೆ ಒಂಟಿ ಸಲಗ ನಿಂತು ಭೀತಿ ಉಂಟುಮಾಡಿದ್ದ ಘಟನೆ ವರದಿಯಾಗಿತ್ತು.ಭಾಗವತಿ ಬಳಿ ಕಾಣಿಸಿಕೊಂಡ ಈ ಆನೆ ರಸ್ತೆ ಪಕ್ಕದಲ್ಲೇ ನಿಂತಿದ್ದು ಕೆಲವು ಸಮಯ ಆತಂಕ ತಂದೊಡ್ಡಿತು.
ರಸ್ತೆಯಲ್ಲಿ ನಿಂತಿದ್ದರಿಂದ ಬಸ್ ಗಳು, ಇತರೆ ವಾಹನಗಳು ದೂರದಲ್ಲೇ ನಿಲ್ಲಿಸಬೇಕಾಯಿತು. ಕೆಲವರು ಆನೆ ಇದ್ದರೂ ಲೆಕ್ಕಿಸದೇ ವಾಹನ ಚಲಾಯಿಸಿದ್ದು ಆನೆ ಬೆದರಿ ದಾಳಿಗೆ ಮುಂದಾಗಿತ್ತು.
ಇನ್ನು ಈ ಭಾಗದಲ್ಲಿ ಹಲವು ಆನೆಗಳಿವೆ.ಆದರೆ ಬಹುತೇಕ ಆನೆಗಳು ರಾತ್ರಿ ಅಥವಾ ಮುಂಜಾನೆ ಈ ಭಾಗದಿಂದ ಮತ್ತೊಂದು ಭಾಗಕ್ಕೆ ಸಂಚಾರ ಮಾಡುತ್ತವೆ.
ಆದರೆ ಈ ಒಂಟಿ ಸಲಗ ಹಲವು ದಿನದಿಂದ ಜನವಸತಿ ಸ್ಥಳಗಳತ್ತ ಬರುತಿದ್ದು ಅರಣ್ಯ ಇಲಾಖೆಯವರು ಈ ಆನೆಯನ್ನ ಮರಳಿ ಕಾಡಿಗೆ ಅಟ್ಟಬೇಕು ಎಂಬುದು ಸ್ಥಳೀಯರ ಆಗ್ರಹ.ವಿಶೇಷವಾಗಿ ಈ ಭಾಗದಲ್ಲಿ ಬರುವ ಪ್ರವಾಸಿಗರಿಗೆ ಹಾಗೂ ವಾಹನ ಚಾಲಕರಿಗೆ ಅರಣ್ಯ ಇಲಾಖೆಯಿಂದ ವಿಶೇಷ ಸೂಚನೆ ನೀಡಲಾಗಿದ್ದು, ಅರಣ್ಯ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ನಿಲ್ಲಬಾರದು. ಪೋಟೋ ಅಥವಾ ವಿಡಿಯೋ ತೆಗೆದುಕೊಳ್ಳುವ ನೆಪದಲ್ಲಿ ಆನೆಗಳನ್ನು ಪ್ರಚೋದಿಸಬಾರದು ಅರಣ್ಯ ಇಲಾಖೆಯವರು ಎಚ್ಚರಿಕೆಯನ್ನು ವಹಿಸುವಂತೆ ಮನವಿ ಮಾಡಿದ್ದಾರೆ.
