ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಶ್ರೀ ಸಿದ್ಧೇಶ್ವರ,ಶ್ರೀ ಸಾತೇರಿ ದೇವಿಯ ಜೊತೆಗೆ ಪರಿವಾರ ದೇವತೆಗಳ ಹಾಗೂ ನೂತನ ಮಂದಿರದ ಶಿಖರ ಪ್ರತಿಷ್ಠಾಪನಾ ಮಹೋತ್ಸವವನ್ನು ಇದೇ ಬರುವ ಶಕೆ 1947 ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ,ಶಿಶಿರ ಋತು,ಪಾಲ್ಗುಣ ಮಾಸ, ಶುಕ್ಲಪಕ್ಷದ ಚತುರ್ಥಿ ದಿನಾಂಕ:21-02-2026 ಶನಿವಾರ ಹಾಗೂ ಪಂಚಮಿ ದಿನಾಂಕ:22-02-2026 ರವಿವಾರ ಹೀಗೆ ಎರಡು ಶುಭದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ದಿನಾಂಕ:21-02-2026 ರ ಶನಿವಾರ ಪ್ರಾಯಶ್ಚಿತ ವಿಧಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ರಾಕ್ಷೋಘ ಹೋಮ ಬಲಿದಾನದೊಂದಿಗೆ ಮುಕ್ತಾಯಗೊಳ್ಳುವುದು.ದಿನಾಂಕ:22-02-2026 ದೇವತಾ ಸ್ಥಾಪನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ,ಪೂರ್ಣಾಹುತಿ, ಆಶೀರ್ವಚನ ಹೀಗೆ ಹಲವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳುವುದು. ದಿನಾಂಕ:22-02-2026 ರಂದು ಸಾಯಂಕಾಲ 04-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಅನ್ನಪ್ರಸಾದ ವಿತರಣೆಯ ಕಾರ್ಯಕ್ರಮ, ದೇವಸ್ಥಾನಕ್ಕೆ ದೇಣಿಗೆ ನೀಡಿದವರಿಗೆ ಅಭಿನಂದನಾ ಕಾರ್ಯಕ್ರಮ,ಸನ್ಮಾನ ಕಾರ್ಯಕ್ರಮ ರಾತ್ರಿ 8-00 ಗಂಟೆಯಿಂದ 9-00 ಗಂಟೆಯವರೆಗೆ,ದೇವರ ಫಲಾವಳಿಗಳ ಲಿಲಾವು ರಾತ್ರಿ 9-00 ರಿಂದ 10-00 ಗಂಟೆಯವರೆಗೆ,ಅಷ್ಟಬಂಧನ ಕಾರ್ಯಕ್ರಮದ ವಿಡಿಯೋ ಪ್ರದರ್ಶನ ರಾತ್ರಿ 11-00 ರಿಂದ 11-30 ಗಂಟೆಯವರೆಗೆ, ಸರಿಯಾಗಿ 11-30 ರಿಂದ ಶ್ರೀ ಸಿದ್ಧೇಶ್ವರ ನವತರುಣ ನಾಟ್ಯ ಮಂಡಳಿ ಅವರಿಂದ ಶ್ರೀ ರಾಮಚಂದ್ರ ಕಾಜುಗಾರ ಇವರ ನಿರ್ದೇಶನದಲ್ಲಿ ಶ್ರೀ ಮುತ್ತುರಾಜ ಎಂ ಸಿಂಗಾಡಿ ಇವರ ಪ್ರಥಮ ವಿರಚಿತ ಶ್ರೀಮಂತರ ದರ್ಪಕ್ಕೆ ಸಿಡಿದೆದ್ದ ಬಡವ ಅರ್ಥಾತ್ ಮನೆಯ ಜ್ಯೋತಿ ಮಸಣದ ಪಾಲಾಯ್ತು ಎಂಬ ಸುಂದರ ಸಾಮಾಜಿಕ ಕನ್ನಡ ನಾಟಕದ ಪ್ರದರ್ಶನ ನಡೆಯಲಿದೆ. ಕಾರಣ ಸದ್ಭಕ್ತರು ತನು-ಮನ- ಧನದ ಸೇವೆಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಿ ಕಾರ್ಯಕ್ರಮ ಚಂದ ಹಾಗ ಯಶಸ್ವಿಗೊಳಿಸಬೇಕೆಂದು ದೇವಸ್ಥಾನದ ಆಡಳಿತ ವರ್ಗ,ಊರ ಗುರುಹಿರಿಯರು ಹಾಗೂ ಸಮಸ್ತ ಭಕ್ತ ಜನತೆ ಅಣಶಿಯವರು ವಿನಂತಿಸಿಕೊಂಡಿದ್ದಾರೆ.
