ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸಪ್ತಸ್ವರ ಸೇವಾ ಸಂಸ್ಥೆ (ರಿ), ಆಲೆಮನೆ ಉತ್ಸವ ಸಮಿತಿ ಹಾಗೂ ಊರಿನ ನಾಗರೀಕರ ಸಂಯುಕ್ತ ಆಶ್ರಯದಲ್ಲಿ ನಾಲ್ಕನೇ ವರ್ಷದ “ಆಲೆಮನೆ ಉತ್ಸವ 2026” ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಫೆಬ್ರವರಿ 14 ರಂದು ಯರಮುಖದ ಜನತಾ ಕಾಲೋನಿಯ ಬಯಲಿನಲ್ಲಿ ವಿಜೃಂಭಣೆಯಿಂದ ಜರುಗಿತು. ರಾತ್ರಿ 7:30ಕ್ಕೆ ಉದ್ಘಾಟನಾ ಸಮಾರಂಭ ನಡೆಯಿತು.

ವೇದಿಕೆಯ ​​ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಸಮಾಜ ಸೇವಕರಾದ ಶ್ರೀ ಸುಬ್ರಾಯ ವಾಳ್ಕೆ ಹಾಗೂ ಗುಂದದ ವೈದಿಕರಾದ ಶ್ರೀ ವೇ|| ಮೂ|| ಪ್ರಸನ್ನ ಭಟ್ಟ ಅವರು ಉದ್ಘಾಟಿಸಿದರು. ನಂದಿಗದ್ದೆಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ಸುದರ್ಶನ ಭಾಗ್ವತ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು .
​ಅತಿಥಿಗಳಾಗಿ ಶ್ರೀ ಶ್ರೀಧರ ಭಾಗ್ಪತ್, ಶ್ರೀಮತಿ ಪದ್ಮಶ್ರೀ ಭಟ್ಟ, ಶ್ರೀಮತಿ ಸುಮಂಗಲಾ ದೇಸಾಯಿ, ಶ್ರೀಮತಿ ಮಂಗಲಾ ಆರ್. ಹೆಗಡೆ, ಶ್ರೀ ಅಜಿತ್ ಥೊರವತ್,ಹಾಗೂ ಶ್ರೀ ಲಕ್ಷ್ಮಣ್ ಅಪ್ಪು ಸಿದ್ಧಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಸತತ ನಾಲ್ಕು ವರ್ಷಗಳಿಂದ ಆಲೆಮನೆ ಹಬ್ಬ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ,ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಉತ್ತಮ ಕಾರ್ಯಕ್ರಮವನ್ನು ಸಂಘಟಿಸುತ್ತಿರುವ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. ನಮ್ಮೆಲ್ಲರ ಸಹಕಾರ,ಪ್ರೋತ್ಸಾಹ, ಮಾರ್ಗದರ್ಶನ ನಿರಂತರ ಇರಲಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಲಾಸ್ಯ ಹೆಗಡೆ ನಿರೂಪಿಸಿ, ಶ್ರೀಲತಾ ಭಾಗ್ವತ್ ಅವರು ವಂದಿಸಿದರು.

​ಕಾರ್ಯಕ್ರಮ ವಿವರ:
3:30 – 5:30 ರ ವರೆಗೆ ಊರ ನಾಗರಿಕರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ,6:30ಕ್ಕೆ ಸೈಕಲ್ ಸರ್ಕಸ್ ಕಾರ್ಯಕ್ರಮ,
​ರಾತ್ರಿ 8:30 ರಿಂದ ‘ಸಪ್ತಸ್ವರ ಮೆಲೋಡೀಸ್’ ತಂಡದಿಂದ ಮತ್ತು ಸ್ಥಳೀಯ ಕಲಾವಿದರಿಂದ “ಸಂಗೀತ ರಸ ಮಂಜರಿ” ಹಾಗೂ ನೃತ್ಯ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಉಚಿತ ಕಬ್ಬಿನ ಹಾಲು ಹಾಗೂ ಮಂಡಕ್ಕಿ ಸವಿಯುವ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.ಗೋಬಿ ಮಂಚೂರಿ, ಮಿರ್ಚಿ ಭಜಿ ಹಾಗೂ ಪಾನಿಪುರಿ ಸ್ಟಾಲ್ ಗಳಲ್ಲಿ ತಿಂಡಿತಿನಿಸಿನ ಸವಿಯ ರುಚಿಯನ್ನು ಸಾರ್ವಜನಿಕರು ಅನುಭವಿಸಿದರು.