ಸುದ್ಧಿಕನ್ನಡ ವಾರ್ತೆ
ಜೊಯಿಡಾ: ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಟ್ರಸ್ಟ ನವರು ಮತ್ತೊಮ್ಮೆ ಸಾರ್ವಜನಿಕ ಕಳಕಳಿ ಮತ್ತು ಕಾಳಜಿಯನ್ನು ಸಾಬೀತುಪಡಿಸುತ್ತಾ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ನಡೆಯಲು ಕಾರಣರಾದರು.
ಶ್ರೀ ಕ್ಷೇತ್ರ ಉಳವಿಯನ್ನೆ ಆಯ್ಕೆ ಮಾಡಿದ ಬಿಇಒ ಬಸೀರ್ ಅಹಮ್ಮದ್ ಖಾನ್ ರವರ ಕಳಕಳಿ ಸಹ ಅನೇಕಾನೇಕ ಸಂದರ್ಭದಲ್ಲಿ ತೋರಿಸಿ ರುಜುವಾತು ಪಡಿಸಿದ್ದಾರೆ.

ತಾಲೂಕಿನ ಉಳವಿ ಪಂಚಾಯತದ ಶಿವಪುರ ಶಾಲೆಯ ಮೇಲೆ ಮರ ಬಿದ್ದು ಜಖಂ ಆದ ಶಾಲೆಗೆ (ಕಳೆದ ವರ್ಷ) ತಾಲೂಕಿನ ಹಿರೀಯ ಅಧಿಕಾರಿಗಳನ್ನು ಮತ್ತು ಪಂಚಾಯತದವರನ್ನು ಕೂಡಲೆ ಭೆಟ್ಟಿ ಕೊಡಿಸಿ ಶಿವಪುರದ ಎರಡೂ ಶಾಲೆಗಳನ್ನು ರಿಪೇರಿ ಮಾಡಿಸಿ ಸಜ್ಜುಗೊಳಿಸಿದ ಮತ್ತು ಬೇರೆ ಬೇರೆ ಸಂದರ್ಭದಲ್ಲಿ ಸಾರ್ವಜನಿಕರ ಭಾವನೆಗೆ ಸ್ಫಂಧಿಸುವ ಗುಣಗಳೂ ಸಹ ಸ್ಪೂರ್ತಿದಾಯಕವಾಗಿದೆ.

ಇವರ ಕಾರ್ಯ ಹೀಗೆಯೇ ಮುಂದುವರೆಯಲಿ, ಜೊಯಿಡಾ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸರ್ಕಾರದ ಹೆಮ್ಮೆಯ ಕಾರ್ಯಕ್ರಮದಲ್ಲಿ ಒಂದಾಯಿತು ಎಂದು ಹೇಳುತ್ತಾ, ಹೀಗೆ ಎಲ್ಲರ ಸಹಕಾರ ಇಂತಹ ಕಾರ್ಯಕ್ರಮದಲ್ಲಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಉತ್ತರಕನ್ನಡ ಜಿಲ್ಲಾ ಭಾರತೀಯ ಕಿಸಾನ ಸಂಘ ಜೊಯಿಡಾ ಉಪಾಧ್ಯಕ್ಷರಾದ ಗೋಪಾಲ ಭಟ್ ಶಿವಪುರ ರವರು ಸುದ್ಧಿಕನ್ನಡ ವಾಹಿನಿಗೆ ನೀಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.