ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕು ಹಿಂದುಳಿದಿದೆ ಎಂದು ಚಿಂತಿಸುವವರಿಗೆ ಇಲ್ಲಿದೆ ಒಂದು ಉತ್ತಮ ಉದಾರಣೆ.

ಆದರೆ ಕೆಲಸ ಮಾಡುವ ಮನಸ್ಸು ಬೇಕು ಅಷ್ಟೇ, ಯಾವುದೇ ಕೆಲಸ ವನ್ನೂ ಮಾಡ ಬೇಕಾದರೆ ಮನಸ್ಸು ಮುಖ್ಯ, ಮನಸ್ಸಿಲ್ಲದ ಮನೆ ವಾರ್ತೆ ಮಾಡಿದರೂ ಅಷ್ಟೇ ಬಿಟ್ಟರೂ ಅಷ್ಟೇ, ಮಾಡಿ ಮಾಡಿ ಕೆಟ್ಟರೋ ಮನವಿಲ್ಲದೆ ಅನ್ನುವುದಕ್ಕಿಂತ, ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂದು ಕೆಲಸ ದಲ್ಲಿ ತೊಡಗಿಸಿ ಕೊಂಡು ನೀವು ಉದ್ದಾರ ವಾಗಿ ಜನರಿಗೂ ದಾರಿ ತೋರಿಸಿ ಎನ್ನುವಂತೆ ಸದಾ ಒಂದಲ್ಲ ಒಂದು ಕೆಲಸ ದಲ್ಲಿ ತನ್ನನ್ನು ತೊಡಗಿಸಿಕೊಂಡು ಜನರಿಗೆ ಮಾರ್ಗದರ್ಶನ ಮಾಡುತ್ತ ತಾನೂ ಕೂಡ ಕೆಲಸ ದಲ್ಲಿ ನಿರತ ಳಾಗಿರುವ* ಓಂ ಪ್ರಾಡಕ್ಟ ನ ಮಾಲಕಿ ಯೇ ಸಂಧ್ಯಾ ದೇಸಾಯಿ. ಕಳೆದ ಐದುವರ್ಷಗಳಹಿಂದೆ ಸಂಧ್ಯಾದೇಸಾಯಿ ಅವರು ಓಂ ಪ್ರೊಡಕ್ಟ ಎಂಬ ಸಂಸ್ಥೆ ಯನ್ನು ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಶೇವಾಳಿ ಗ್ರಾಮದ ತಮ್ಮ ಮನೆಯಲ್ಲಿಯೇ ಸ್ಥಾಪಿಸಿದರು.

ಈ ಸಂಸ್ಥೆಯ ಮೂಲಕ ಅವರು ಘಮ ಘಮಿಸುವ ರಸಂ ಪೌಡರ್, ಚಟ್ನಿ ಪುಡಿ ಮತ್ತು ಸಾಂಬಾರ್ ಪೌಡರ್ (ಪುಡಿ )ಗಳನ್ನು ತಯಾರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಖರೀದಿಸಿದ, ಸಾಂಬಾರು ಪದಾರ್ಥ ಗಳು ಒಣ ಮೆಣಸು ಗಳನ್ನು ಶುಚಿ ಗೊಳಿಸಿ ಒಣಗಿಸಿ ಅಗತ್ಯಕ್ಕೆ ತಕ್ಕಂತೆ ಹುರಿದು ಪುಡಿ ಮಾಡುತ್ತಾರೆ ಮಸಾಲೆ ಪದಾರ್ಥ ಗಳು ಇಂಗು ಇವುಗಳ ಮಿಶ್ರಣ ಕ್ಕೆ ಮಾರು ಹೋಗದವರಿಲ್ಲ ಅಷ್ಟು ಪರಿಮಳ ಭರಿತ ರಸಂ ಪುಡಿ, ಸಾಂಬಾರ್ ಪುಡಿ ಮತ್ತು ಚಟ್ನಿ ಪುಡಿ ಗಳನ್ನು ನೆನಪಿಸಿದರೆಯೇ ಬಾಯಲ್ಲಿ ನೀರು ಬರುತ್ತದೆ.

ಸಂಧ್ಯಾ ಅವರು ಇವನ್ನೆಲ್ಲ ತಯಾರಿಸಿಮಾರುಕಟ್ಟೆಗೆಕಳಿಸುತ್ತಾರೆ ಬೇಡಿಕೆ ಯಂತೆ ಪ್ಯಾಕ್ ಮಾಡಿ ಕೊಡುತ್ತಾರೆ ಪ್ರತಿ ತಿಂಗಳು ಸುಮಾರು ಐವತ್ತು ಕೆಜಿ ಯಷ್ಟು ರೆಡಿ ಮಾಡಿ 100 ಗ್ರಾಮ 200 ಗ್ರಾಮ ಹೀಗೆ ಪ್ಯಾಕ್ ಮಾಡಿ ಬೇಡಿಕೆ ಗೆ ಅನುಗುಣವಾಗಿ ಪದಾರ್ಥ ಗಳನ್ನು ಪೂರೈಸುತ್ತಿದ್ದಾರೆ.

ಬೇಡಿಕೆಗಳನ್ನು ಹೇಳಿದರೆ ಸದಾ ಪೂರೈಕೆಗೆ ಸಿದ್ದರಿದ್ದಾರೆ ಸಂಧ್ಯಾ ಪದ್ಮನಾಭ ದೇಸಾಯಿ ಮೂಲತಃ ಕೃಷಿಕರು ಸದಾ ಕಾಲ ಕೃಷಿ ಚಟುವಟಿಕೆ ಯ ಜೊತೆಗೆ ಹೈನುಗಾರಿಕೆ ಮನೆಯ ಅಲಂಕಾರಕ್ಕೆ. ಪುಷ್ಪ ಕೃಷಿ ಯನ್ನೂ ಮಾಡುತ್ತಿದ್ದಾರೆ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆ ಯಲ್ಲೂ ಸದಾ ಮುಂದಿದ್ಫು ಸ್ವರ್ಣವಲ್ಲಿ ಮಠ ಸೊಂದಾದ ಮಾತೃ ಮಂಡಳಿಯ ಅಧ್ಯಕ್ಷ ರಾಗಿಯೂ ಕೆಲಸ ಮಾಡಿದ್ದು ಈಗಲೂ ಸಂಘಟನೆಯಲ್ಲಿದ್ದಾರೆ.

ಸದಾ ಚಟುವಟಿಕೆ ಯಲ್ಲಿ ಇರುವ ಓಂ ಪ್ರೊದಕ್ಟ್ ನ ಮಾಲಕಿ ಸಂದ್ಯಾ ದೇಸಾಯಿ ಅವರ ಕಾರ್ಯ ನೋಡಿ ಉಳಿದವರೂ ಸದಾ ಚಟುವಟಿಕೆ ಮಾಡುವ ಮೂಲಕ ಹಿಂದುಳಿದ ತಾಲೂಕಿನ ಹೆಸರನ್ನು ಮುಂದುವರೆದ ತಾಲೂಕು ಎಂದು ಹೇಳುವಂತೆ ಮಾಡಲು ಸಹ ಕರಿಸಿ ತಮ್ಮ ಸಂಪತ್ತನ್ನು ಹೆಚ್ಚಿಸಿ ಕೊಳ್ಳಲು ಮುಂದಾಗಬೇಕು ಇದು ಮನಸ್ಸಿದ್ದರೆ ಸಾಧ್ಯ.