ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ಗುಂದ ಅರಣ್ಯ ವಲಯದ ಶೇವಾಳಿ ಗ್ರಾಮ ದ ಪದ್ಮನಾಭ ದೇಸಾಯಿ ಯವರ ಮನೆ ಪಕ್ಕದಲ್ಲಿದ್ದ ಎರಡು ಜೇನು ಗೂಡು ಗಳನ್ನು ಕರಡಿ ತಿಂದು ನಾಶ ಮಾಡಿದೆ.
ಕಳೆದ ಎರಡು ದಿನಗಳ ಹಿಂದೆ ಶೇವಾಳಿ ಗ್ರಾಮದ ಕಾರೇಮನೆಯ ಶ್ರೀನಾಥ್ ದೇಸಾಯಿ ಯವರ ಹಲವಾರು ಜೇನುಗೂಡು ಗಳನ್ನು ತಿಂದು ಹೋದ ಕರಡಿ ಮಂಗಳವಾರ ರಾತ್ರಿ ಪದ್ಮನಾಭ ದೇಸಾಯಿ ಯವರ ಮನೆ ಪಕ್ಕದ ತೋಟದಲ್ಲಿ ಇಟ್ಟಿರುವ ಜೇನುಗೂಡು ಗಳಲ್ಲಿ ಕೆಲವು ಗೂಡುಗಳನ್ನು ನಾಶಮಾಡಿದೆ ಅದೇದಿನ ರಾತ್ರಿ ಯಲ್ಲಿ ಅಲ್ಲಿನ ಹೊಸಮನೆ ಸುಧಾಕರ ದೇಸಾಯಿ ಅವರ 4 ಜೇನುಗೂಡು ಗಳನ್ನು ತಿಂದು ನಾಶ ಮಾಡಿದೆ.

ಜೇನುಗೂಡು ಗಳಲ್ಲಿ ಕಡಿಮೆ ಎಂದರೂ ಒಂದೊಂದರಲ್ಲಿ ಎರಡು ಕಿಲೋ ದ ವರೆಗೂ ಜೇನು ತುಪ್ಪ ತುಂಬಿತ್ತು ಎಂದವರು ಹೇಳುತ್ತಾರೆ ತಾಲೂಕಿನ ರೈತರು ಅಡಿಕೆ ತೋಟದಲ್ಲಿ ಹೆಚ್ಚಾಗಿ ಜೇನುಗೂಡು ಗಳನ್ನು ಇಟ್ಟು ಉಪಬೆಳೆ ಯಾಗಿ ಜೇನು ಸಾಕಾಣಿಕೆ ಮಾಡುವ ಮೂಲಕ ತಮ್ಮಆದಾಯ ಹೆಚ್ಚಿಸಿ ಖರ್ಚು ಗಳನ್ನು ನಿರ್ವಹಿಸುತ್ತಿರುವುದು ಸರ್ವೆ ಸಾಮಾನ್ಯ ವಾಗಿದೆ ಆದರೆ ಈ ಕರಡಿ ಉಪಟಳ ದಿಂದ ಈಗ ರೈತರು ತಲೆ ಮೇಲೆ ಕೈ ಹೊತ್ತಿದ್ದಾರೆ ಒಡೆದ ಜೇನು ಪೆಟ್ಟಿಗೆ ಯಿಂದ ಜೇನು ಹುಳಗಳು ಹೊರ ಬಿದ್ದು ಒದ್ದಾಟ ನಡೆಸುತ್ತಿವೆ ಇವನ್ನು ಮತ್ತೆ ಪೆಟ್ಟಿಗೆ ಒಳಗೆ ತುಂಬುವದು ಸುಲಭದ ಕೆಲಸ ವಲ್ಲ. ಅಲ್ಲದೇ ಎಲ್ಲ ಜೇನು ಹುಳಗಳು ಒಂದುಕಡೆ ನಿಲ್ಲುವುದೂ ಇಲ್ಲ ಹೀಗಾಗಿ ಕಷ್ಟ ಕರವಾಗಿದೆ .
ಒಟ್ಟಾರೆ ಕರಡಿ ಉಪಟಲದಿಂದ ಸಣ್ಣ ಮಕ್ಕಳನ್ನು ಅಂಗಳಕ್ಕೆ ಬಿಡಲು ಶಾಲೆಗೆ ಕಳಿಸಲು ಹೆದರುವ ಪರಿಸ್ಥಿತಿ ಬಂದಿದೆ. ಅರಣ್ಯ ಇಲಾಖೆ ಕರಡಿ, ಹುಲಿ ಆನೆ ಗಳನ್ನು ಹೊರಗಿನಿಂದ ತಂದು ಬಿಡುವುದನ್ನು ನಿಲ್ಲಿಸಬೇಕು, ಸ್ಥಳೀಯರು ಕಾಡು ಪ್ರಾಣಿಗಳನ್ನು ನಂಬುತ್ತಾರೆ ಮತ್ತು ಯಾವಾಗಲೂ ಅವುಗಳು ಸಿಕ್ಕಾಗ ಜನರು ದಾರಿ ಬಿಡುತ್ತಾರೆ ಅವುಗಳು. ತಮ್ಮ ನಡೆಯೆಡೆಗೆ ಹೋಗುತ್ತವೆ. ಜನ ಮತ್ತು ಜಾನುವಾರು ಗಳ ನಡುವೆ ಸಂಘರ್ಷ ತುಂಬಾ ಕಡಿಮೆ, ಆದರೆ ಇತ್ತೀಚಿಗೆ ನಡೆಯುವ ಘಟನೆ ನೋಡಿದಾಗ ಕಾಡುಪ್ರಾಣಿಗಳು ಸ್ಥಳೀಯ ವಲ್ಲ ಎಂಬ ಅನುಮಾನ ಜನರನ್ನು ಕಾಡುತ್ತಿದೆ.
ಈಗಾಗಲೇ ಮೂರು ರೈತರ ಜೇನುಗೂಡು ನಾಶ ಮಾಡಿದ ಕರಡಿ ಮತ್ತೆ ಎಲ್ಲಿ ಬರುತ್ತದೆ ಯೋ ಎಂಬ ಅಂಜಿಕೆ ರೈತರಲ್ಲಿ ಕಳವಳ ಮೂಡಿದಸಿದೆ
