Banner Ad

ಸುದ್ದಿಕನ್ನಡ ವಾರ್ತೆ
ಅಹ್ಮದಾಬಾದ್: ಅಹ್ಮದಾಬಾದ್ ನಲ್ಲಿ ಇಂದು ಮಧ್ಯಾನ್ಹ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ ಎಐ-171 ನಲ್ಲಿ ಪ್ರಯಾಣಿಸುತ್ತಿದ್ದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ (Vijay Rupani) ನಿಧನರಾಗಿದ್ದಾರೆ.

ವಿಜಯ್ ರುಪಾನಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ ಎಐ 171 ನಲ್ಲಿ 12 ನೇ ಪ್ರಯಾಣಿಕರಾಗಿ ಟಿಕೆಟ್ ಕಾಯ್ದಿರಿಸಿದ್ದರು. ವಿಮಾನ ಪ್ರಯಾಣಿಕರ ವಿವರದಲ್ಲಿ ವಿಜಯ್ ರುಪಾನಿ ಈ ವಿಮಾನ ಹತ್ತಿದ್ದರು.

Banner Ad

ಬೋಯಿಂಗ್ 787 ಡ್ರೀಮ್ ಲೈನರ್ ನಿರ್ವಹಿಸುತ್ತಿದ್ದ ವಿಮಾನ ಜೂನ್ 12, 2025 ರಂದು ಮಧ್ಯಾಹ್ನ 1:38 ಕ್ಕೆ ಅಹಮದಾಬಾದ್ ನಿಂದ ಹೊರಟ ಸ್ವಲ್ಪ ಸಮಯದ ನಂತರ ಮೇಘನಿ ನಗರದ ವಸತಿ ಪ್ರದೇಶಕ್ಕೆ ದುರಂತವಾಗಿ ಅಪ್ಪಳಿಸಿತು.

ನಿರ್ಗಮನದ ಸುಮಾರು ಐದು ನಿಮಿಷಗಳ ನಂತರ ಈ ಅಪಘಾತ ಸಂಭವಿಸಿದೆ. ವಿಮಾನ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರ ನೇತೃತ್ವದಲ್ಲಿತ್ತು. ಕ್ಲೈವ್ ಕುಂದರ್ ಸಹ-ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ವಿಮಾನದಲ್ಲಿ ಒಟ್ಟು 242 ಜನ ಪ್ರಯಾಣಿಕರಿದ್ದರು.

ಅಹಮದಾಬಾದ್‍ನಿಂದ ಲಂಡನ್ ಗ್ಯಾಟ್ವಿಕ್ ಗೆ ಮಧ್ಯಾಹ್ನ 3.38 ಕ್ಕೆ ಹೊರಟ ವಿಮಾನವು ಬೋಯಿಂಗ್ 787-8 ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು.

ಪ್ರಧಾನಿ ಮೋದಿ ಗೃಹ ಸಚಿವ ಅಮಿತ್ ಶಾ ಮತ್ತು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರೊಂದಿಗೆ ಮಾತನಾಡಿದರು. ಅವರು ಅಹಮದಾಬಾದ್‍ಗೆ ಹೋಗಿ ಸಾಧ್ಯವಿರುವ ಎಲ್ಲ ಸಹಾಯವನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.

Banner Ad