ಸುದ್ದಿಕನ್ನಡ ವಾರ್ತೆ
ಅಹ್ಮದಾಬಾದ್: ಅಹ್ಮದಾಬಾದ್ ನಲ್ಲಿ ಇಂದು ಮಧ್ಯಾನ್ಹ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ ಎಐ-171 ನಲ್ಲಿ ಪ್ರಯಾಣಿಸುತ್ತಿದ್ದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ (Vijay Rupani) ನಿಧನರಾಗಿದ್ದಾರೆ.
ವಿಜಯ್ ರುಪಾನಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ ಎಐ 171 ನಲ್ಲಿ 12 ನೇ ಪ್ರಯಾಣಿಕರಾಗಿ ಟಿಕೆಟ್ ಕಾಯ್ದಿರಿಸಿದ್ದರು. ವಿಮಾನ ಪ್ರಯಾಣಿಕರ ವಿವರದಲ್ಲಿ ವಿಜಯ್ ರುಪಾನಿ ಈ ವಿಮಾನ ಹತ್ತಿದ್ದರು.
ಬೋಯಿಂಗ್ 787 ಡ್ರೀಮ್ ಲೈನರ್ ನಿರ್ವಹಿಸುತ್ತಿದ್ದ ವಿಮಾನ ಜೂನ್ 12, 2025 ರಂದು ಮಧ್ಯಾಹ್ನ 1:38 ಕ್ಕೆ ಅಹಮದಾಬಾದ್ ನಿಂದ ಹೊರಟ ಸ್ವಲ್ಪ ಸಮಯದ ನಂತರ ಮೇಘನಿ ನಗರದ ವಸತಿ ಪ್ರದೇಶಕ್ಕೆ ದುರಂತವಾಗಿ ಅಪ್ಪಳಿಸಿತು.
ನಿರ್ಗಮನದ ಸುಮಾರು ಐದು ನಿಮಿಷಗಳ ನಂತರ ಈ ಅಪಘಾತ ಸಂಭವಿಸಿದೆ. ವಿಮಾನ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರ ನೇತೃತ್ವದಲ್ಲಿತ್ತು. ಕ್ಲೈವ್ ಕುಂದರ್ ಸಹ-ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ವಿಮಾನದಲ್ಲಿ ಒಟ್ಟು 242 ಜನ ಪ್ರಯಾಣಿಕರಿದ್ದರು.
ಅಹಮದಾಬಾದ್‍ನಿಂದ ಲಂಡನ್ ಗ್ಯಾಟ್ವಿಕ್ ಗೆ ಮಧ್ಯಾಹ್ನ 3.38 ಕ್ಕೆ ಹೊರಟ ವಿಮಾನವು ಬೋಯಿಂಗ್ 787-8 ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು.
ಪ್ರಧಾನಿ ಮೋದಿ ಗೃಹ ಸಚಿವ ಅಮಿತ್ ಶಾ ಮತ್ತು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರೊಂದಿಗೆ ಮಾತನಾಡಿದರು. ಅವರು ಅಹಮದಾಬಾದ್‍ಗೆ ಹೋಗಿ ಸಾಧ್ಯವಿರುವ ಎಲ್ಲ ಸಹಾಯವನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.