ಸುದ್ದಿ ಕನ್ನಡ ವಾರ್ತೆ
. ಅಹಮದಾಬಾದ್:ಇಲ್ಲಿನ ವಿಶ್ವದ ಅತಿ ದೊಡ್ಡ ಕ್ರೀಡಾಂಗಣದಲ್ಲಿ ಒಂದಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ 2026 ರ ಫೈನಲ್ ಸೆಣೆಸಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ಟೈಟಾನ್ಸ್ (GT) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆರ್ ಸಿಬಿ ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಇತಿಹಾಸ ಸೃಷ್ಟಿಸಿದೆ.ಟಾಸ್ ಗೆದ್ದ ಆರ್ ಸಿಬಿ ನಾಯಕ ರಜತ್ ಪಾಟೀದಾರ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು.
ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಆರ್ ಸಿಬಿ ಬೌಲರ್‌ಗಳು ಗುಜರಾತ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು.
ಅಪಾಯಕಾರಿ ಬ್ಯಾಟರ್ ಶುಭಮನ್ ಗಿಲ್ 10 ರನ್ ಮತ್ತು ಸಾಯಿ ಸುದರ್ಶನ್ 12 ರನ್ ಅವರನ್ನು ಆರ್ ಸಿಬಿ ಬೌಲರ್‌ಗಳು ಬೇಗನೆ ಪೆವಿಲಿಯನ್‌ಗೆ ಅಟ್ಟಿದರು.ಆರ್ ಸಿಬಿ ಪರ ಮಾರಕ ಬೌಲಿಂಗ್ ದಾಳಿ ಸಂಘಟಿಸಿದ ರಾಸಿಖ್ ಸಲಾಂ ಕೇವಲ 27 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸುವ ಮೂಲಕ ಜಿಟಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಮಧ್ಯಮ ಕ್ರಮಾಂಕದಲ್ಲಿ ದಿಟ್ಟ ಹೋರಾಟ ನಡೆಸಿದ ವಾಷಿಂಗ್ಟನ್ ಸುಂದರ್ ಭರ್ಜರಿ ಅರ್ಧಶತಕ 37 ಎಸೆತಗಳಲ್ಲಿ ಔಟಾಗದೆ 50 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇವರ ಜವಾಬ್ದಾರಿಯುತ ಆಟದ ನೆರವಿನಿಂದ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು.ಆರ್ ಸಿಬಿ ತಂಡದ ಈ ಸತತ ಎರಡನೇ ಟ್ರೋಫಿ ಗೆಲುವಿನ ಸಂಭ್ರಮವು ಮೈದಾನದಲ್ಲಿದ್ದ ಸಹಸ್ರಾರು ಅಭಿಮಾನಿಗಳಲ್ಲಿ ಹಾಗೂ ದೇಶಾದ್ಯಂತ ಹಬ್ಬದ ವಾತಾವರಣ ಸೃಷ್ಟಿಸಿತು.ಈ ಸಲನೂ ಕಪ್ ನಮ್ದೆ ಎಂಬ ಹರ್ಷೋದ್ಗಾರ ಸಾಮಾಜಿಕ ಜಾಲತಾಣದಲ್ಲಿ ಎಲ್ಲೇಡೆ ರಾರಾಜಿಸಿತು. ಸಂಕ್ಷಿಪ್ತ ಸ್ಕೋರ್ ವಿವರ:ಗುಜರಾತ್ ಟೈಟಾನ್ಸ್ .(GT): 20 ಓವರ್‌ಗಳಲ್ಲಿ 155/8 (ವಾಷಿಂಗ್ಟನ್ ಸುಂದರ್ 50*, ರಾಸಿಖ್ ಸಲಾಂ 3/27)
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): 18 ಓವರ್‌ಗಳಲ್ಲಿ 161/5 (ವಿರಾಟ್ ಕೊಹ್ಲಿ 75, ವೆಂಕಟೇಶ್ ಅಯ್ಯರ್ 32)
ಫಲಿತಾಂಶ: ಆರ್ ಸಿಬಿ ತಂಡಕ್ಕೆ 5 ವಿಕೆಟ್‌ಗಳ ಭರ್ಜರಿ ಜಯ ಹಾಗೂ ಐಪಿಎಲ್ 2026 ರ ಚಾಂಪಿಯನ್ ಪಟ್ಟ.
