ಸುದ್ಧಿಕನ್ನಡ ವಾರ್ತೆ
ನವದೆಹಲಿ: ಅಮೇರಿಕಾ,ಇಸ್ರೇಲ್, ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಸಂಘರ್ಷವು ಜಾಗತಿಕ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಗಲ್ಫ ದೇಶಗಳ ಯುದ್ಧದಿಂದಾಗಿ ಭಾರತಿಂದ ಹಣ್ಣು, ತರಕಾರಿ, ಬಾಸುಮತಿ ಅಕ್ಕಿ ಮತ್ತು ಇತರ ವಸ್ತುಗಳನ್ನು ಸಾಗಿಸುತ್ತಿದ್ದ ದೊಡ್ಡ ಹಡಗು ಸಿಲುಕಿಕೊಳ್ಳುಂತಾಗಿದೆ. ಇದರಿಂದಾಗಿ ಭಾರಿ ಪ್ರಮಾಣದಲ್ಲಿ ಆರ್ಥಿಕ ನಷ್ಟವೂ ಆರಂಭವಾಗಿದೆ. ಇಷ್ಟೇ ಅಲ್ಲದೆಯೇ ಈಗಾಗಲೇ ಯುದ್ಧದ ಪರಿಣಾಮ ಭರತದಲ್ಲಿ ಖಾದ್ಯ ಎಣ್ಣೆ, ಡ್ರೈ ಫ್ರುಟ್ಸ, ಖರ್ಜೂರ, ಬೇಳೆಕಾಳು, ಗ್ಯಾಸ್ ಸಿಲಿಂಡರ್ ದುಬಾರಿಯಾಗಿದ್ದು ಗಲ್ಫ ದೇಶಗಳ ಯುದ್ಧದ ಬಿಸಿ ಭಾರತದಲ್ಲಿ ಜನಸಾಮಾನ್ಯರಿಗೆ ತಟ್ಟಿದಂತಾಗಿದೆ.

ಮಹಾರಾಷ್ಟ್ರದ ರೈತರು ವಿದೇಶಕ್ಕೆ ರಫ್ತು ಮಾಡಿದ್ದ ಕೃಷಿ ಉತ್ಪನ್ನಗಳು ತುಂಬಿದ್ದ 1000 ಕಂಟೇನರ್ ಗಳು ದುಬೈ ಬಂದರಿನಲ್ಲಿ ಸಿಲುಕಿಕೊಂಡಿದೆ. ಇವುಯಗಳಲ್ಲಿ ಬಾಳೆಹಣ್ಣು, ದಾಳಿಂಬೆ, ದ್ರಾಕ್ಷಿ, ಕಲ್ಲಂಗಡಿ, ಈರುಳ್ಳಿ, ಸೇರಿದಂತೆ ವಿವಿಧ ತರಕಾರಿಗಳು ಸೇರಿವೆ. ಇದರಿಂದಾಗಿ ರಪ್ತುದಾರರಿಗೆ ಭಾರಿ ನಷ್ಟವುಂಟಾಗಿದೆ.

ಗಲ್ಫ ದೇಶಗಳಿಗೆ ರಫ್ತು ಮಾಡುತ್ತಿದ್ದ 4 ಲಕ್ಷ ಟನ್ ಬಾಸುಮತಿ ಅಕ್ಕಿ ತುಂಬಿದ್ದ ಕಂಟೇನರ್ ಬಂದರುಗಳಲ್ಲಿ ಸಿಲುಕಿಕೊಂಡಿದೆ. ಭಾರತವು ಬಾಸುಮತಿ ಅಕ್ಕಿ ಉತ್ಪಾದನೆಯ ಶೇ 72 ರಷ್ಟನ್ನು ಗಲ್ಫ ದೇಶಗಳಿಗೆ ರಫ್ತು ಮಾಡುತ್ತದೆ.

ಹೀಗೆ ವಿವಿಧ ದೇಶಗಳಿಗೆ ಭಾರತದಿಂದ ರಫ್ತು ಮಾಡಲಾಗುತ್ತಿದ್ದ ಹಣ್ಣು ತರಕಾರಿಗಳು, ಆಹಾರ ಧಾನ್ಯಗಳು ವಿವಿಧ ಬಂದರುಗಳಲ್ಲಿ ಸಿಲುಕಿಕೊಂಡಿದ್ದು ಭಾರಿ ನಷ್ಟ ಅನುಭವಿಸುವಂತಾಗಿದೆ. ಇನ್ನೂ ಕೂಡ ಯುದ್ಧ ಸಂಘರ್ಷ ಮುಂದುವರೆದಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.