ಸುದ್ದಿ ಕನ್ನಡ ವಾರ್ತೆ
ಕೊಲಂಬೊ:ಭಾರತೀಯ ಅಂಧರ ವನಿತೆಯರ ಕ್ರಿಕೆಟ್ ತಂಡದ ಆಟಗಾರರು ಕೊಲಂಬೊದಲ್ಲಿ ಭಾನುವಾರ ನಡೆದ ಮೊದಲ ಅಂಧರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು.
ಭಾನುವಾರ ನಡೆದ ಅಂತಿಮ ಪೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸುವ ಮೂಲಕ ಈ ಸಾಧನೆ ಮಾಡಿದರು. ಈ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ,ಪಾಕಿಸ್ತಾನ, ಶ್ರೀಲಂಕಾ,ಮತ್ತು ಯುಎಸ್‌ಎ ಮುಂತಾದ ತಂಡಗಳು ಭಾಗವಹಿಸಿದ್ದವು.
ಈ ಪಂದ್ಯಾವಳಿಯನ್ನು ಶ್ರೀಲಂಕಾ ಮತ್ತು ಭಾರತ ದೇಶಗಳು ಜಂಟಿಯಾಗಿ ಆಯೋಜಿಸಿದ್ದವು.ಈ ಐತಿಹಾಸಿಕ ಗೆಲುವು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.ಭಾರತೀಯ ಅಂಧರ ವನಿತೆಯರ ಕ್ರಿಕೆಟ್ ತಂಡದ ಗೆಲುವು ದೇಶದಾದ್ಯಂತ ಕ್ರೀಡಾ ಮನೋಭಾವನೆಯನ್ನು ಮತ್ತಷ್ಟು ಹೆಚ್ಚಿಸಿದೆ.
