ಸುದ್ದಿ ಕನ್ನಡ ವಾರ್ತೆ
ಗಂಗಾವತಿ: ತಾಲೂಕಿನ ಸಾಣಾಪುರ ತುಂಗಭದ್ರಾ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ತೆಲಂಗಾಣ ರಾಜ್ಯದ ಯುವ ವೈದ್ಯ ಡಾ. ಅನನ್ಯ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಡಾ.ಅನನ್ಯ ಅವರನ್ನು ಅಗ್ನಿಶಾಮಕ ದಳ,ಜಿಂದಾಲ್ ಕಂಪನಿಯ ನೀರಿನಲ್ಲಿ ಕಾರ್ಯಾಚರಣೆ ಮಾಡುವ ತಂದ,ಪೊಲೀಸರು ಹಾಗೂ ಸ್ಥಳೀಯ ಈಜುಗಾರರು ಕಾರ್ಯಾಚರಣೆ ಮಾಡಿ ಗುರುವಾರ ಸಂಜೆ 4.30 ಕ್ಕೆ ಕಲ್ಲು ಗುಂಡುಗಳ ಮಧ್ಯೆ ಸಿಲುಕಿಕೊಂಡಿದ್ದ ಡಾ.ಅನನ್ಯ ಮೃತ ದೇಹವನ್ನು ಪತ್ರೆ ಮಾಡಿ ಮೇಲಕ್ಕೆತ್ತಲಾಯಿತು.
ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಮಾಡಿ ಡ್ರೋಣ ಕ್ಯಾಮರ ಮೂಲಕ 25ಕ್ಕೂ ಹೆಚ್ಚು ಈಜುಗಾರರು ಶೋಧ ನಡೆಸಿದ್ದರು.
ಹೈದ್ರಾಬಾದ್ ಮೂಲದ ಡಾ.ಅನನ್ಯ ಸ್ನೇಹಿತರೊಂದಿಗೆ ಹಂಪಿ,ಆನೆಗೊಂದಿ,ಸಾಣಾಪೂರ ಭಾಗಕ್ಕೆ ಪ್ರವಾಸಕ್ಕೆ ಆಗಮಿಸಿ ಸಾಣಾಪೂರದ ಗೆಸ್ಟ್ ಹೌಸ್ ನಲ್ಲಿ ತಂಗಿದ್ದರು.ನದಿಯಲ್ಲಿ ಸ್ನಾನ ಮಾಡಲು ತೆರಳಿ ನೀರಿನ ಸೆಳವಿಗೆ ಸಿಕ್ಕು ನಾಪತ್ತೆಯಾಗಿದ್ದರು.
ತೆಲಂಗಾಣ ರಾಜ್ಯದ ಪ್ರಭಾವಿ ರಾಜಕೀಯ ಕುಟುಂಬಕ್ಕೆ ಸೇರಿದ್ದ ಡಾ.ಅನನ್ಯ ಅವರನ್ನು ಹುಡುಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ತೆಲಂಗಾಣ ಸಿಎಂ ರೇವಂತ ರೆಡ್ಡಿ ಕರೆ ಮಾಡಿ ಡಾ.ಅನನ್ಯ ಅವರ ಪತ್ತೆ ಮಾಡವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಎಸ್ಪಿ ಡಾ.ರಾಮ್ ಎಲ್ ಅರಸಿದ್ದಿ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ,ಡಿಎಸ್ಪಿ ಸಿದ್ದಲಿಂಗನಗೌಡ ಪಾಟೀಲ್, ಸಿಪಿಐ ಸೋಮಶೇಖರ ಜುಟ್ಟಲ್ ಸ್ಥಳದಲ್ಲಿ ಮೊಕ್ಕಾಂ ಮಾಡಿ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದರು. ಈ ಸಂದರ್ಭದಲ್ಲಿ ಮೃತ ಡಾ.ಅನನ್ಯ ಸಂಬಂಧಿಗಳು ,ಆಪ್ತರಿದ್ದರು.