ಸುದ್ದಿ ಕನ್ನಡ ವಾರ್ತೆ

ಬೆಳಗಾವಿಯ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ 8 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 15ರಿಂದ 24ರವರೆಗೆ 10 ದಿನಗಳ ಕಾಲ “ಶರಣ ಸಂಸ್ಕೃತಿ ಸಂಸ್ಕಾರ ಶಿಬಿರ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಳೆಯ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳಿಗೆ ಭಾರತೀಯ ಪರಂಪರೆ,ಸಂಸ್ಕೃತಿ ಹಾಗೂ ಸಂಸ್ಕಾರಗಳ ಅರಿವು ಮೂಡಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ.ಶರಣ ಸಂಸ್ಕೃತಿಯ ಮೂಲಭೂತ ತತ್ವಗಳನ್ನು ಪರಿಚಯಿಸುವ ಜೊತೆಗೆ,ವಚನ ಸಾಹಿತ್ಯ, ಕಾಯಕ,ದಾಸೋಹ,ಪ್ರಸಾದ, ಶಿಸ್ತು ಹಾಗೂ ದೇಶಭಕ್ತಿಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಪ್ರಯತ್ನ ಮಾಡಲಾಗುವುದು.

ಬಸವಾದಿ ಶಿವಶರಣರು ಸಾರಿದ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ರೂಢಿಸಲು ತಜ್ಞರಿಂದ ಉಪನ್ಯಾಸಗಳು,ಶರಣರ ಕ್ಷೇತ್ರ ಅಧ್ಯಯನ,ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಿಬಿರದಲ್ಲಿ ಒಳಗೊಂಡಿರುತ್ತದೆ.

ಶಿಬಿರವು ನಾಗನೂರು ರುದ್ರಾಕ್ಷಿ ಮಠ,ಶಿವಬಸವ ನಗರ,ಬೆಳಗಾವಿಯಲ್ಲಿ ನಡೆಯಲಿದ್ದು,ಆಸಕ್ತ ವಿದ್ಯಾರ್ಥಿಗಳು ಏಪ್ರಿಲ್ 10, 2026ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಶಿಬಿರದ ಪ್ರವೇಶ ಶುಲ್ಕ ₹1,000 ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9008442557,9964201977