ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ-ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಉದಯೋನ್ಮುಖ ಬರಹಗಾರ, ಸಂಘಟಕ,ವಾಗ್ಮಿ,ಕನ್ನಡ ಕಟ್ಟಾಳು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಖ್ಯಾತ ವೈದ್ಯ ಡಾ.ಸಂಜಯ ಅಪ್ಪಯ್ಯ ಶಿಂದಿಹಟ್ಟಿ ಅವರು ತಮ್ಮ ಚೊಚ್ಚಲ ಕಿತ್ತೂರ ಕಲಿ ವೀರ ಕೇಸರಿ ಅಮಟೂರ ಬಾಳಪ್ಪ ಕೃತಿಯನ್ನು ಬೈಲಹೊಂಗಲ ನಗರದ ಗ್ಯಾಲಾಕ್ಸಿ ಗಾರ್ಡನ್ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲೆಯ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ ಬಸನಗೌಡ ಪಾಟೀಲ ಅವರಿಗೆ ಪ್ರೀತಿಯಿಂದ ಅರ್ಪಿಸಿ, ಗೌರವಿಸಿದ ಸಂದರ್ಭ.
ಯರಗಟ್ಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ರಾಜಶೇಖರ ಬಿರಾದಾರ, ಡಾ. ಎಸ್.ಎಸ್.ಲಗಳಿ,ಮೂಡಲಗಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದಶಿಗಳಾದ ಶ್ರೀ ಎ.ಎಚ್.ವಂಟಗೋಡಿ, ಖ್ಯಾತ ಹೋಟೆಲ ಉದ್ಯಮಿ ಶ್ರೀ ಮಹಾಂತೇಶ ಎಸ್.ಪಾಟೀಲ ಉಪಸ್ಥಿತರಿದ್ದರು.
