ಸುದ್ಧಿಕನ್ನಡ ವಾರ್ತೆ
ಸಾಗರ: ಜಗತ್ತಿನಾದ್ಯಂತ ಹಲವು ಪ್ರಬೇಧದ ಕೀಟಗಳನ್ನು ಕಾಣಬಹುದು. ಭಾರತದಲ್ಲಿಯೂ ಹಲವು ಪ್ರಬೇಧಧ ಕೀಟಗಳನ್ನು ಕಾಣಬಹದಾಗಿದೆ. ಭಾರತದಲ್ಲಿಯೂ 140 ಜಾತಿಯ ಪಾಸ್ಮಿಡಾಗಳಲ್ಲಿ ಎಲೆ ಕೀಟ ಸಾಕಷ್ಟು ಅಪರೂಪದ್ದು. ಏಷ್ಯಾ ಖಂಡದಿಂದ ಅಮೆರಿಕಾದವರೆಗೂ ಇದರ ಆಧಿಪತ್ಯವಿದೆ. ಪರಿಸರದ ಎಲೆಯಂತೆಯೇ ಕಾಣಿಸುವ ಈ ಎಲೆ ಕೀಟದ ಆಹಾರ ಕೂಡ ಎಲೆಯೇ.

ಇಂತಹ ಎಲೆಕೀಟವೊಂದು ಮಂಗಳವಾರ ಸಾಗರ ತಾಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉದ್ರೆಯ ಉಮೇಶ್ ಯು.ಎಚ್. ಮನೆಯ ಹಿತ್ತಲಿನಲ್ಲಿ ಕಾಣಿಸಿತ್ತು. ಯಾರನ್ನೂ ಕಚ್ಚದ, ಮರದ ಮೇಲಿನಿಂದಲೇ ಮೊಟ್ಟೆಯನ್ನು ಕೆಳಗೆ ಹಾಕಿ ಮರಿ ಮಾಡುವ ಎಲೆ ಕೀಟಗಳಲ್ಲಿ 40ಕ್ಕೂ ಹೆಚ್ಚು ವೈವಿಧ್ಯತೆಯಿದೆ. ಎಲೆಯಲ್ಲಿಯೇ ಮರಿ ಎಲೆಗಳನ್ನು ಹೊಂದಿದಂತಹ ರಚನೆಯ ಈ ಉದ್ರೆಯ ಎಲೆ ಕೀಟದ ರಚನೆ, ಓಡಾಟ ಗಮನ ಸೆಳೆಯುವಂತಿತ್ತು. ಉಮೇಶ್‍ರ ಪುತ್ರಿ ಲಾವಣ್ಯ ರವರು ಈ ಕೀಟದ ಚಿತ್ರವನ್ನು ಚಿತ್ರೀಕರಿಸಿದ್ದಾರೆ.