ಸುದ್ದಿ ಕನ್ನಡ ವಾರ್ತೆ

ತೀರ್ಥಹಳ್ಳಿ : ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಈಗಾಗಲೇ ಆರ್ ಎಂ ಮಂಜುನಾಥ ಗೌಡರ ಬೆಂಗಳೂರಿನ ನಿವಾಸದಲ್ಲಿ ಹಾಗೂ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ನ ಮ್ಯಾನೇಜರ್ ಶೋಭಾ, ಡ್ರೈವರ್ ಮನೆ ಸೇರಿ ಒಟ್ಟು ಎಂಟು ಕಡೆ ದಾಳಿ ಮಾಡಲಾಗಿತ್ತು.

ಈಗ ಇದೆ ವಿಚಾರವಾಗಿ ಆರ್ ಎಂ ಮಂಜುನಾಥ ಗೌಡರ ಆಪ್ತರಾಗಿರುವ ಕೃಷ್ಣಮೂರ್ತಿ ಭಟ್ ಮನೆ ಮೇಲೆ ಇ. ಡಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಬೆಟ್ಟಮಕ್ಕಿಯ ಅವರ ನಿವಾಸದ ಮೇಲೆ ಇ. ಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ.

15 ಕ್ಕೂ ಹೆಚ್ಚು ವರ್ಷಗಳಿಂದ ಆರ್ ಎಂ ಮಂಜುನಾಥ ಗೌಡರ ಜೊತೆಗೆ ಇರುವ ಕೃಷ್ಣಮೂರ್ತಿ ಭಟ್ ಮನೆ ಸಹ ಆರ್ ಎಂ ಎಂ ಮನೆ ಪಕ್ಕದಲ್ಲೇ ಇದೆ. ಅತ್ಯಂತ ಆಪ್ತರಾಗಿದ್ದ ಕೃಷ್ಣಮೂರ್ತಿ ಭಟ್ ಮನೆ ಮೇಲೆ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು ಯಾವ ವಿಚಾರದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎಂಬುದೇ ಕುತೂಹಲ ಮೂಡಿಸಿದೆ. ಕೃಷ್ಣಮೂರ್ತಿ ಭಟ್ ಗೂ ಡಿಸಿಸಿ ಬ್ಯಾಂಕ್ ಗೂ ಲಿಂಕ್ ಏನು? ಎಂಬ ಪ್ರೆಶ್ನೆ ಕಾಡುತ್ತಿದೆ. ಒಟ್ಟಿನಲ್ಲಿ ಇಂದು ಸಂಜೆ ವೇಳೆ ಈ ಬಗ್ಗೆ
ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.

ಕೃಷ್ಣಮೂರ್ತಿ ಭಟ್ ಅಷ್ಟೇ ಅಲ್ಲದೆ ಮತ್ತೊರ್ವರ ಮನೆಗೂ ಇ.ಡಿ ಅಧಿಕಾರಿಗಳು ಭೇಟಿ ನೀಡಿದ್ದರು ಎನ್ನಲಾಗುತ್ತಿದ್ದು ಇನ್ನು ಸ್ಪಷ್ಟವಾಗಿ ತಿಳಿಯಬೇಕಿದೆ.