Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಮಧ್ಯಪ್ರಾಚ್ಯದ ಯುದ್ಧವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಗೋವಾಕ್ಕೆ ಬಿಸಿ ತಟ್ಟಿದೆ. ಗೋವಾದಲ್ಲಿ ವಾಣಿಜ್ಯ ಸಿಲಿಂಡರ್ ಪರೈಕೆಯಿಲ್ಲದೆಯೇ ಗೋವಾ ರಾಜಧಾನಿ ಪಣಜಿ ಸೇರಿದಂತೆ ರಾಜ್ಯಾದ್ಯಂತ ಹಲವು ಹೋಟೆಲ್ ಗಳು ಸಂಪೂರ್ಣ ಬಂದ್ ಆಗಿದೆ. ಹೋಟೆಲ್ ಗಳು ಬಂದ್ ಆಗಿರುವುದರಿಂದ ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ.

ಗೋವಾದಲ್ಲಿ ಸದ್ಯ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಪೂರೈಕೆಯಾಗುತ್ತಿದೆ. ಆದರೆ ವಾಣಿಜ್ಯ ಬಳಕೆಯ ಸಿಲಿಂಡರ್ ಭಾರಿ ಕೊರತೆಯುಂಟಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಸಿಲಿಂಡರ್ ಲಭಿಸದ ಕಾರಣ ದೊಡ್ಡ ದೊಡ್ಡ ಹೋಟೆಲ್ ಗಳು ತಮ್ಮ ಮೆನುಗಳಲ್ಲಿ ಕೆಲವೇ ಆಹಾರವನ್ನು ಮಾತ್ರ ಗ್ರಾಹಕರಿಗೆ ನೀಡುತ್ತಿವೆ. ಆದರೆ ಇನ್ನೂ ಕೆಲ ಹೋಟೆಲ್ ಗಳಿಗೆ ಸಿಲಿಂಡರ್ ಗಳೇ ಲಭಿಸದ ಕಾರಣ ಸಂಪೂರ್ಣವಾಗಿ ಬಂದ್ ಆಗಿರುವ ದೃಶ್ಯ ಕಂಡುಬರುತ್ತಿದೆ. ಇದರಿಂದಾಗಿ ಹೊಟೇಲ್ ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಕೆಲಸವಿಲ್ಲದೆಯೇ ತೊಂದರೆ ಅನುಭವಿಸುವಂತಾಗಿದೆ.

Banner Ad

ಗೋವಾದಲ್ಲಿ ಹಲವು ಪ್ರಮುಖ ಹೋಟೆಲ್ ಗಳೇ ಸಂಪೂರ್ಣ ಬಂದ್ ಆಗಿರುವುದರಿಂದ ಗೋವಾಕ್ಕೆ ಬಂದ ಪ್ರವಾಸಿಗರು ಹೋಟೆಲ್ ಗಳಿಗಾಗಿ ಹುಡುಕಾಟ ನಡೆಸುವಂತಾಗಿದೆ. ಈ ಮೂಲಕವಾಗಿ ಮಧ್ಯಪ್ರಾಚ್ಯ ಯುದ್ಧ ಪರಿಸ್ಥಿತಿಯು ಗೋವಾ ಪ್ರವಾಸೋದ್ಯಮಕ್ಕೂ ಪೆಟ್ಟು ಬೀಳುವಂತೆ ಮಾಡಿದೆ.

Banner Ad