ಸುದ್ಧಿಕನ್ನಡ ವಾರ್ತೆ
ಪಣಜಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಗೋವಾದಿಂದ ವಿವಿದೆಡೆ ಹಾರಾಟ ನಡೆಸುವ ವಿಮಾನಗಳನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ಹೊರತುಪಡಿಸಿ ಇತರೆಡೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೂ ತೊಂದರೆಯುಂಟಾಗುವಂತಾಗಿದೆ.

ಭಾರತೀಯ ವಿಮಾನಯಾನ ಪ್ರಾಧಿಕಾರ ಜಾರಿಗೊಳಿಸಿರುವ ಸೂಚನೆಯ ಅನುಸಾರ- ಗೋವಾದ ದಾಬೋಲಿಂ ವಿಮಾನ ನಿಲ್ದಾಣದಿಂದ ಗಲ್ಫ ದೇಶಗಳಿಗೆ ತೆರಳುವ ಎಲ್ಲ ವಿಮಾನಗಳನ್ನೂ ಮಾರ್ಚ 26 ರ ವರೆಗೆ ರದ್ಧುಗೊಳಿಸಲಾಗಿದೆ. ಇಷ್ಟೇ ಅಲ್ಲದೆಯೇ ಏರ್ ಇಂಡಿಯಾ ಎಕ್ಸಪ್ರೆಸ್ ದಾಬೋಲಿಂ -ದುಬೈ ವಿಮಾನ ಸೇವೆಯನ್ನೂ ಮಾರ್ಚ 28 ರವರೆಗೆ ರದ್ಧುಗೊಳಿಸಲಾಗಿದೆ.

ಇಷ್ಟೇ ಅಲ್ಲದೆಯೇ ಗೋವಾದ ದಾಬೋಲಿಂ ವಿಮಾನ ನಿಲ್ದಾಣದಿಂದ ಇತರ ಅನೇಕ ಅಂತರಾಷ್ಟ್ರೀಯ ಮಾರ್ಗಕ್ಕೆ ಹಾರಾಟ ನಡೆಸುವ ವಿಮಾನಗಳ ಮೆಲೆಯೂ ಪರಿಣಾಮವುಂಟಾಗಿದ್ದು , ಗೋವಾದ ವಿಮಾನ ನಿಲ್ದಾಣದಿಂದ ಏರ್ ಅರೇಬಿಯಾದ ಶಾರಜಾಹ ವಿಮಾನ ಸೇವೆ, ಕತಾರ್ ಏರ್ ವೇಜ್ ನ ದೋಹಾ ವಿಮಾನ ಸೇವೆ, ಅಂತೆಯೇ ಗೋವಾದಿಂದ ದುಬೈ ಮೂಲಕವಾಗಿ ಹಾರಾಟ ನಡೆಸುತ್ತಿದ್ದ ಹಲವು ವಿಮಾನ ಸೇವೆಗಳಲ್ಲಿ ವ್ಯತ್ಯಯವುಂಟಾಗಿದೆ. ಇದರಿಂದಾಗಿ ಅಂತರಾಷ್ಟ್ರೀಯ ಮಾರ್ಗಕ್ಕೆ ಪ್ರಯಾಣ ನಡೆಸುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಇದರಿಂದಾಗಿ ಪ್ರಯಾಣಿಕರು ಸಂಬಂಧಿತ ಏರ್ ಲೈನ್ಸ ನಿಂದ ವಿಮಾನ ಹಾರಾಟದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದ ನಂತರವೇ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು. ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ತಮ್ಮ ವಿಮಾನದ ಟಿಕೆಟ್ ಬುಕಿಂಗ್ ಪುನಃ ಪರಿಶೀಲನೆ ನಡೆಸಬೇಕು ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಮನವಿ ಮಾಡಿದೆ.