ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮಹದಾಯಿ ಅಭಯಾರಣ್ಯವನ್ನು ಹುಲಿ ಮೀಸಲು ಪ್ರದೇಶವೆಂದು ಘೋಷಿಸುವ ಬಗ್ಗೆ ಹೈಕೋರ್ಟ್ ನಿರ್ದೇಶನವನ್ನು ಗೋವಾ ರಾಜ್ಯ ಸರ್ಕಾರ ಪಾಲಿಸಿದೆ. ಸುಪ್ರೀಂ ಕೋರ್ಟ್ ನಲ್ಲಿ ಈ ಪ್ರಕರಣವನ್ನು ಪ್ರಶ್ನಿಸಲಾಗಿದ್ದು ಈಗ ಅಂತಿಮ ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಜನವರಿ 27ರಂದು ನಡೆಯಲಿದೆ ಎಂದು ರಾಜ್ಯ ಸಚಿವ ವಿಶ್ವಜಿತ್ ರಾಣಿ ಮಾಹಿತಿ ನೀಡಿದ್ದಾರೆ.

ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಮುಂಬೈ ಹುಚ್ಚ ನ್ಯಾಯಾಲಯದ ಗುವಾಪೀಠವು ಮಹದಾಯಿ ಅಭಯಾರಣ್ಯ ಮತ್ತು ಅದಕ್ಕೆ ಹೊಂದಿಕೊಂಡ ಅರಣ್ಯ ಪ್ರದೇಶಕ್ಕೆ ಹುಲಿ ಮೀಸಲು ಪ್ರದೇಶ ಎಂಬ ಸ್ಥಾನಮಾನ ನೀಡಬೇಕೆಂದು ಆದೇಶ ನೀಡಿತ್ತು. ಈ ನಿರ್ಧರು ಸ್ಥಳೀಯ ಜನರ ಜೀವನೋಪಾಯ ಭೂಮಿಯ ಹಕ್ಕುಗಳು ಮತ್ತು ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು ಎಂದು ವಾದಿಸಿ ಗೋವಾ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ಅರ್ಜಿಯನ್ನು ಸಲ್ಲಿಸಿತ್ತು.
ಇದೀಗ ಈ ಪ್ರಕರಣದ ವಿಚಾರಣೆಯು ಸುಪ್ರೀಂ ಕೋರ್ಟ್ ನಲ್ಲಿ ಜನವರಿ 27ರಂದು ನಡೆಯಲಿದೆ.