ಸುದ್ದಿಕನ್ನಡ ವಾರ್ತೆ
ಪಣಜಿ: ಗೋವಾ ವಿಧಾನಸಭಾ ಚಳಿಗಾಲದ ಅಧಿವೇಶನ ಸೋಮವಾರ ರಾಜ್ಯಪಾಲದ ಅಶೋಕ ಗಜಪತಿ ರಾಜು ರವರ ಭಾಷಣದ ಮೂಲಕ ಆರಂಭಗೊಂಡಿತು. ಆದರೆ ರಾಜ್ಯಪಾಲರು ಭಾಷಣ ಆರಂಭಿಸುತ್ತಿದ್ದಂತೆಯೇ ವಿರೋದ ಪಕ್ಷದ ನಾಯಕ ಯೂರಿ ಅಲೆಮಾಂವ ರವರ ನೇತೃತ್ವದಲ್ಲಿ ವೀರೋಧಿಗಳು ಸರ್ಕಾರದ ವಿರುದ್ಧ ವಾಗ್ದಾಳಿ ಆರಂಭಿಸಿದರು.
ಗೋವಾದ ಹಡಪಡೆಯಲ್ಲಿ ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟ ವ್ಯಕ್ತಿಗಳ ಉಲ್ಲೇಖವನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಆರಂಭಿಸಬೇಕು ಹಾಗೂ ಘಟನೆಯ ಜವಾಬ್ದಾರಿಯಾಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಕುರಿತು ಭರವಸೆ ನೀಡಬೇಕು ಎಂದು ಪ್ರತಿಪಕ್ಷಗಳು ಆಘ್ರಹಿಸಿದರು. ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಘ್ರಹಿಸಿದರು.
ರಾಜ್ಯಪಾಲರು ತಮ್ಮ ಭಾಷಣ ಆರಂಭಿಸಿದರೂ ಕೂಡ ಪ್ರತಿಪಕ್ಷದ ಶಾಸಕರು ಕೈಯ್ಯಲ್ಲಿ ಭಿತ್ತಿಪತ್ರ ಹಿಡಿದು ಸರ್ಕಾರದ ವಿರುದ್ಧ ಸದನದ ಬಾವಿಗೆ ಇಳಿದು ಪ್ರತಿಭಟನೆ ಆರಂಭಿಸಿದರು. ಶೇಮ್ …ಶೇಮ್… ಎಂದು ಪ್ರತಿಪಕ್ಷಗಳು ಘೋಷಣೆ ಕೂಗಿದರು. ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ಕೂಗುತ್ತ ಪ್ರತಿಪಕ್ಷದ ಶಾಸಕರು ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರು.
ಸಭಾಪತಿಗಳಾದ ಗಣೇಶ ಗಾಂವಕರ್ ರವರು ಹಲವು ಬಾರಿ ಪ್ರತಿಪಕ್ಷಗಳಿಗೆ ಸೂಚನೆ ನೀಡಿದರೂ ಕೂಡ ಪ್ರತಿಭಟನೆ ಮುಂದುವರೆಸಿಯೇ ಇದ್ದರು. ಅಧಿವೇಶನ ಆರಂಭದಲ್ಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ ಪ್ರತಿಪಕ್ಷದ ಶಾಸಕರನ್ನು ಅಧಿವೇಶನ ಕಲಾಪದಿಂದ ಹೊರಹಾಕಲಾಯಿತು.
