ಸುದ್ಧಿಕನ್ನಡ ವಾರ್ತೆ
ಪಣಜಿ: ಪರಿಸರದೊಂದಿಗೆ ಆರೋಗ್ಯ ಕಾಪಾಡಿಕೊಳ್ಳಿ ಎಂಬ ಸಂದೇಶ ನೀಡುತ್ತ ಮೂವರು ಯುವಕರು ಪುಣೆಯಿಂದ ಕನ್ಯಾಕುಮಾರಿಯ ವರೆಗೆ ವರೆಗೆ ಸೈಕಲ್ ಪ್ರವಾಸ ಆರಂಭಿಸಿದ್ದಾರೆ. ಇದೀಗ ಈ ಯುವಕರು ಗೋವಾಕ್ಕೆ ಬಂದು ತಲುಪಿದ್ದಾರೆ.
ಶಹಾಜಿ ಶಿವಾಲೆ ಪಾಟೀಲ್ ಕುಟುಂಬದವರು ಈ ಸೈಕಲ್ ಸವಾರರಿಗೆ ಸ್ವಾಗತ ಕೋರಿ ಬರಮಾಡಿಕೊಂಡರು. ಸುನೀಲ್ ದಾಸ್, ಸಂತೋಷ ರೋಡೆ, ಸುನೀಲ್ ಜಗದಾಳೆ ರವರು ಈ ಸೈಕಲ್ ಪ್ರವಾಸ ಹಮ್ಮಿಕೊಂಡಿದ್ದಾರೆ.
ಕಳೆದ ಶನಿವಾರ ಪುಣೆಯಿಂದ ಇವರು ಸೈಕಲ್ ಪ್ರವಾಸ ಆರಂಭಿಸಿದ್ದರು. 1600 ಕಿಮಿ ಕ್ರಮಿಸಿ ಜನವರಿ 4 ರಂದು ಕನ್ಯಾಕುಮಾರಿ ತಲುಪುವ ಉದ್ದೇಶ ಹೊಂದಿದ್ದಾರೆ. ಇದುವರೆಗೂ ಈ ಯುವಕರು 450 ಕಿಮಿ ದೂರ ಸೈಕಲ್ ಪ್ರವಾಸ ಪೂರ್ಣಗೊಳಿಸಿದ್ದಾರೆ.
ಸೈಕಲ್ ಮೂಲಕ ಗೋವಾಕ್ಕೆ ಬರುವಾಗ ಸುಂದರ ಪ್ರಕೃತಿ ಸೌಂದರ್ಯ ಸವಿಯಲು ಸಾಧ್ಯವಾಯಿತು ಎಂದು ಸೈಕಲ್ ಸವಾರರಾದ ಸುನೀಲ್ ದಾಸ್ ಹಾಗೂ ಸಂತೋಷ ರೋಡೆ ರವರು ನುಡಿದರು. ಆರೋಗ್ಯದಿಂದಿರಲು ಹಾಗೂ ಗಟ್ಟಿಮುಟ್ಟಾಗಿರಲು ಪ್ರತಿಯೊಬ್ಬರೂ ಸೈಕಲ್ ಓಡಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಇವರು ಸೈಕಜಲ್ ಪ್ರವಾಸ ಮಾಡುವ ಸಂದರ್ಭದಲ್ಲಿ ಪರಿಸರ ರಕ್ಷಿಸುವ ಸಂದೇಶ ನೀಡುತ್ತಾ ಬಂದಿದ್ದಾರೆ. ಕನ್ಯಾಕುಮಾರಿ ತಲುಪಿದ ನಂತರ ಇವರು ವಾಪಸ್ಸು ಬರುವಾಗ ರೈಲ್ವೆಯ ಪ್ರಯಾಣ ಮಾಡಲಿದ್ದಾರೆ.
