ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಿಂದ ಅಹಮದಾಬಾದ್ ಗೆ ತೆರಳುವ ಇಂಡಿಗೊ ವಿಮಾನ (6ಇ620) ರಲ್ಲಿ ಶುಕ್ರವಾರ ಸಂಜೆ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಪ್ರವಾಸಿಗರು ಆತಂಕಕ್ಕೊಳಗಾದ ಘಟನೆ ನಡೆದಿದೆ. ಈ ವಿಮಾನ ಸ್ಪೋಟಿಸುವುದಾಗಿ ಟಿಶ್ಯೂ ಪೇಪರ್ ವೊಂದರಲ್ಲಿ ಬರೆಯಲಾಗಿತ್ತು,ಇದು ಸಿಕ್ಕ ಕೂಡಲೆ ಎಲ್ಲರೂ ಆತಂಕಕ್ಕೊಳಗಾಗಿದ್ದರು.
ಗೋವಾದಿಂದ ಅಹಮದಾಬಾದ್ ಗೆ ಶುಕ್ರವಾರ ಸಂಜೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಬಂದಿತ್ತು. ಈ ವಿಮಾನದಲ್ಲಿ 140 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಗೋವಾದಿಂದ ಹೊರಟ ವಿಮಾನ ಅಹಮದಾಬಾದ್ ತಲುಪುತ್ತಿದ್ದಂತೆಯೇ ಪ್ರವಾಸಿಗರನ್ನು ಕೂಡಲೆ ಸ್ಥಳಾಂತರಿಸಲಾಯಿತು. ನಂತರ ಸಿಐಎಸ್ ಎಫ್ ಹಾಗೂ ಬಾಂಬ್ ನಿಷ್ಕ್ರೀಯ ದಳ ತಪಾಸಣೆ ನಡೆಸಿತು. ಆದರೆ ಅಂತಹ ಸ್ಪೋಟಕ ವಸ್ತುಗಳು ಯಾವುದೂ ಕಂಡುಬಂದಿಲ್ಲ ಎನ್ನಲಾಗಿದೆ.
ಶುಕ್ರವಾರ ಸಂಜೆ ಗೋವಾದ ಮೋಪಾ ವಿಮಾನ ನಿಲ್ದಾಣದಿಂದ ಈ ವಿಮಾನವು ಅಹಮದಾಬಾದ್ ಗೆ ಹೊರಟಿತ್ತು. ಈ ಘಟನೆಯು ಇತರ ಯಾವುದೇ ವಿಮಾನ ಹಾರಾಟಗಳ ಮೇಲೆ ಪರಿಣಾಮ ಬೀರಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.
