ಸುದ್ಧಿಕನ್ನಡ ವಾರ್ತೆ
ಪಣಜಿ: ನವೆಂಬರ್ 9 ರಂದು ನಡೆಯಲಿರುವ ‘ಐರನ್‍ಮ್ಯಾನ್ 70.3 ಗೋವಾ ಸೈಕ್ಲಿಂಗ್ ಲೆಗ್’ ಗಾಗಿ, ಲೋಕೋಪಯೋಗಿ ಇಲಾಖೆಯು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಣಜಿಯ ಬಸ್ ನಿಲ್ದಾಣದ ವೃತ್ತದಿಂದ ಹೊಸ ಜುವಾರಿ ಸೇತುವೆಯವರೆಗಿನ ವಾಹನ ಸಂಚಾರವನ್ನು ಭಾನುವಾರ ಬೆಳಿಗ್ಗೆ 5 ರಿಂದ ಮಧ್ಯಾಹ್ನ 3 ರವರೆಗೆ ತಾತ್ಕಾಲಿಕವಾಗಿ ಬದಲಾಯಿಸಿದೆ.

ಸಂಚಾರದಲ್ಲಿನ ಈ ಬದಲಾವಣೆಗಳೊಂದಿಗೆ ಸಹಕರಿಸುವಂತೆ ಲೋಕೋಪಯೋಗಿ ಇಲಾಖೆ ವಾಹನ ಚಾಲಕರಿಗೆ ಮನವಿ ಮಾಡಿದೆ. ಈ ಮುಖ್ಯ ಹೆದ್ದಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಓಡಾಟವಿರುವುದರಿಂದ ಮಾರ್ಗ ಬದಲಾವಣೆಯು ಪ್ರಯಾಣಿಕರಲ್ಲಿ ಗೊಂದಲ ಮೂಡಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯು ಮುಂಚಿತವಾಗಿಯೇ ಸೂಚನೆ ನೀಡಿದೆ.