ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯ ಸರ್ಕಾರದ ಬೇಡಿಕೆಯಂತೆ ಗೋವಾದಲ್ಲಿ ಕೇಂದ್ರ ಸರ್ಕಾರ ಅನುಮೋದಿತ ತೂಕ ಮತ್ತು ಅಳತೆ ಪರೀಕ್ಷಾ ಕೇಂದ್ರವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಶನಿವಾರ ಪಣಜಿಯಲ್ಲಿ ಆಯೋಜಿಸಿದ್ದ- “ಕಾನೂನು ಮಾಪನಶಾಸ್ತ್ರ ನಿಯಂತ್ರಕರ ಮೊದಲ ರಾಷ್ಟ್ರೀಯ ಸಮ್ಮೇಳನ 2025” ಒಂದು ದಿನದ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಸರ್ಕಾರವು ಗೋವಾಕ್ಕೆ ವಿವಿಧ ಉಪಕರಣಗಳನ್ನು ಒದಗಿಸಲಿದೆ ಎಂದು ಸಚಿವ ಜೋಶಿ ಹೇಳಿದರು. ಇದರಿಂದ ಮತ್ತು ಅನುಮೋದಿತ ಕೇಂದ್ರದಿಂದಾಗಿ, ಇಲ್ಲಿನ ತೂಕ ಮತ್ತು ಅಳತೆ ಇಲಾಖೆಯ ಕೆಲಸವು ಹೆಚ್ಚು ನಿಖರವಾಗಿರುತ್ತದೆ. ಇಲಾಖೆಯ ಕೆಲಸವು ಪಾರದರ್ಶಕವಾಗಿರುತ್ತದೆ ಮತ್ತು ಇದು ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಕೇಂದ್ರ ಸರ್ಕಾರವು ಗ್ರಾಹಕರಿಗೆ ಆದ್ಯತೆ ನೀಡುತ್ತಿದೆ. ಇದರ ಹೊರತಾಗಿ, ತಯಾರಕರು ಮತ್ತು ವ್ಯಾಪಾರಿಗಳ ಅನುಕೂಲಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅವರ ವ್ಯವಹಾರವನ್ನು ಸುಲಭಗೊಳಿಸಲು ಹೊಸತನವನ್ನು ತರಲಾಗುತ್ತಿದೆ. ಈ ಗ್ರಾಹಕರು ಹಾಗೂ ವ್ಯಾಪಾರಿಗಳು ಮತ್ತು ಉದ್ಯಮಿಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ನಾವು ಮುಂದುವರಿಯುತ್ತಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನುಡಿದರು.
ತೂಕ ಮತ್ತು ಅಳತೆ ಕಾಯ್ದೆಯ ಹಳೆಯ ನಿಬಂಧನೆಗಳನ್ನು ಕೇಂದ್ರವು ಬದಲಾಯಿಸಿದೆ ಎಂದು ಸಚಿವ ಜೋಶಿ ಹೇಳಿದರು. ಈ ಹಿಂದೆ, ಸಾಮಾನ್ಯ ಅಪರಾಧಗಳಿಗೆ ಭಾರೀ ಶಿಕ್ಷೆಯ ನಿಬಂಧನೆ ಇತ್ತು. ಕೆಲವು ಸಂದರ್ಭಗಳಲ್ಲಿ ವ್ಯಾಪಾರಿಗಳು ಅಥವಾ ತಯಾರಕರು ಜೈಲು ಶಿಕ್ಷೆಯನ್ನು ಸಹ ಎದುರಿಸಬೇಕಾಗಿತ್ತು. ನಾವು ಇದನ್ನು ಬದಲಾಯಿಸಿದ್ದೇವೆ ಮತ್ತು ನಿಯಮಗಳನ್ನು ಸಡಿಲಿಸಿದ್ದೇವೆ. ವ್ಯಾಪಾರಿಗಳು ಮತ್ತು ತಯಾರಕರು ಸಹ ಜವಾಬ್ದಾರಿಯುತವಾಗಿ ವರ್ತಿಸಬೇಕು. ಅವರು ಗ್ರಾಹಕರ ನಂಬಿಕೆಯನ್ನು ಮುರಿಯಬಾರದು. ತೂಕ ಮತ್ತು ಅಳತೆಗಳು ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ನಾವು ಇಲಾಖೆಗೆ ಡಿಜಿಟಲ್ ತಂತ್ರಜ್ಞಾನವನ್ನು ತರುತ್ತಿದ್ದೇವೆ. ನ್ಯಾಯಯುತ ಮತ್ತು ಪಾರದರ್ಶಕ ಮಾರುಕಟ್ಟೆಗಾಗಿ ನಮ್ಮ ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನುಡಿದರು.
ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ- 2047 ರ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವಲ್ಲಿ ತೂಕ ಮತ್ತು ಅಳತೆ ಇಲಾಖೆಯ ಪಾತ್ರವು ಮುಖ್ಯವಾಗಿರುತ್ತದೆ. ಕೇಂದ್ರವು ಒದಗಿಸುವ ನೆರವಿನೊಂದಿಗೆ, ಕುಡ್ಚಡೆಯಲ್ಲಿ ಅತ್ಯಾಧುನಿಕ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು. ಇದು ನಿಖರವಾದ ಅಳತೆ ಉಪಕರಣಗಳೊಂದಿಗೆ ರಾಜ್ಯದಲ್ಲಿ ಪರಿಶೀಲನೆ ಮತ್ತು ತಪಾಸಣೆಯನ್ನು ಸುಧಾರಿಸುತ್ತದೆ ಎಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಹೇಳಿದರು.
ಈ ಸಂದರ್ಭದಲ್ಲಿ ಗೋವಾ ರಾಜ್ಯ ಸಚಿವ ದಿಗಂಬರ್ ಕಾಮತ್, ಕೇಂದ್ರ ಸಹಕಾರ್ಯದರ್ಶಿ ಭರತ್ ಖೇರಾ, ರಾಜ್ಯ ಕಾರ್ಯದರ್ಶಿ ಸಂಜೀವ್ ಗಡ್ಕರ್ ಮತ್ತು ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Union Minister Pralhad Joshi said that as per the demand of Goa State Government, Central Government approved Weights and Measures Testing Center will soon be set up in Goa. He was speaking at the inauguration of a one-day national conference – “First National Conference of Statutory Metrology Regulators 2025” organized at Panaji on Saturday.
