ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಹಾಗೂ ಕರ್ನಾಟಕ ರಾಜ್ಯವನ್ನು ಜೋಡಿಸುವ ಹಾಗೂ ನೂರಾರು ವರ್ಷಗಳ ಇತಿಹಾಸವುಳ್ಳ ಐತಿಹಾಸಿಕ “ಕೆಳಘಾಟ್: ಮಾರ್ಗ ಇದೀಗ ಶಾಶ್ವತವಾಗಿ ಬಂದ್ ಆಗಲಿದೆ. ಕರ್ನಾಟಕ ಸರ್ಕಾರವು ಈ ಮಾರ್ಗವನ್ನು ಶಾಶ್ವತವಾಗಿ ಬಂದ್ ಮಾಡುವ ನಿರ್ಣಯ ತೆಗೆದುಕೊಂಡಿದೆ. ಇದರಿಂದಾಗಿ ನೂರಾರು ವರ್ಷಗಳಿಂದ ವ್ಯಾಪಾರ, ಪ್ರವಾಸ, ಹಾಗೂ ಸೈನ್ಯಕ್ಕಾಗಿಯೂ ಬಳಕೆಯಾಗಿದ್ದ ಈ ಪ್ರಮುಖ ಮಾರ್ಗ ಇದೀಗ ಇತಿಹಾಸದ ಪುಟ ಸೇರಿಕೊಳ್ಳಲಿದೆ.
ಈ ಮಾರ್ಗ ಬಂದ್ ಆಗಲು ಕಾರಣವೇನು…?
“ಕೆಳಘಾಟ್” ಮಾರ್ಗವನ್ನು ಶಾಶ್ವತವಾಗಿ ಬಂದ್ ಮಾಡುವ ನಿರ್ಣಯವನ್ನು ಕರ್ನಾಟಕ ಸರ್ಕಾರವು ತೆಗೆದುಕೊಂಡಿದೆ. ಭೀಮಗಡ ವನ್ಯಜೀವಿ ಅಭಯಾರಣ್ಯದ ಸರಹದ್ದಿನಲ್ಲಿ ಕೃಷ್ಣಾಪುರ, ತಾಳೆವಾಡಿ, ಈ ಊರುಗಳ ಪುನರ್ವಸತಿ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಇದರಿಂದಾಗಿ ಈ ಭಾರದ ರಸ್ತೆ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ. 2019 ರಲ್ಲಿ ಭೀಮಗಡ ಅಭಯಾರಣ್ಯದ 190 ಚೌ.ಮೀಟರ್ ಪರಿಸರವನ್ನು ಘೋಷಿಸಿದ ನಂತರ ಈ ಮಾರ್ಗದ ಬಳಕೆ ಕಡಿಮೆಯಾಗಿತ್ತು.
1878 ನೇಯ ಸಾಲಿನಲ್ಲಿ ಆಂಗ್ಲೊ-ಪೋರ್ಚುಗೀಸ್ ಕರಾರಾನುಸಾರ ಲೊಂಡಾ ದಿಂದ ವಾಸ್ಕೊ-ದ-ಗಾಮಾ ರೈಲ್ವೆ ಲೈನ್ ಆರಂಭಗೊಳ್ಳುವ ಮುನ್ನ ಕೆಳಘಾಟ್ ಮಾರ್ಗವನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಗೋವಾದ ವಾಳಪೈಯಿಂದ ಕರ್ನಾಟಕಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿತ್ತು.
ಕೆಳಘಾಟ್ ಮಾರ್ಗ ಕೇವಲ ವ್ಯಾಪಾರ ವಹಿವಾಟಿಗೆ ಮಾತ್ರವಲ್ಲದೆಯೇ ಸೈನಿಕರ ಓಡಾಟಗಳಿಗೂ ಪ್ರಮುಖವಾಗಿ ಬಳಕೆ ಮಾಡಲಾಗುತ್ತಿತ್ತು. ಮರಾಠಾ ಸಾಮ್ರಾಜ್ಯ, ಮುಘಲರು, ಹಾಗೂ ಇತರ ಅನೇಕರು ಸೈನ್ಯಗಳು ಈ ಮಾರ್ಗವನ್ನು ಬಳಸಿಕೊಂಡು ಛತ್ರಪತಿ ಶಿವಾಜಿ ಮಹಾರಾಜರ ತಾಬಾ ಇದ್ದ ಭೀಮಗಡದಲ್ಲಿರುವ ನೈಸರ್ಗಿಕ ಕೋಟೆಗೆ ತೆರಳಲು ಈ ಮಾರ್ಗ ಬಳಕೆ ಮಾಡಲಾಗುತ್ತಿತ್ತು.
ಅನೇಕ ವರ್ಷಗಳಿಂದ ಬಳಕೆ ಕಡಿಮೆಯಾಗಿದ್ದ ಈ ಮಾರ್ಗ ಕೋವಿಡ್ -19 ಸಂದರ್ಭದಲ್ಲಿ ಈ ಮಾರ್ಗ ಮತ್ತೆ ಚರ್ಚೆಗೆ ಬಂದಿತ್ತು. ಕೋವಿಡ್ ಸಂದರ್ಭದಲ್ಲಿ ಕರ್ನಾಟಕ ಹಾಗೂ ಗೋವಾ ಗಡಿ ಬಂದ್ ಆಗಿದ್ದ ಸಂದರ್ಭದಲ್ಲಿ ಹಲವರು ಈ ಮಾರ್ಗವನ್ನು ಬಳಕೆ ಮಾಡಿಕೊಂಡು ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸಿಕೊಂಡಿದ್ದರು. ಇದೀಗ ಈ ಮಾರ್ಗ ಶಾಶ್ವತವಾಗಿ ಬಂದ್ ಆಗುತ್ತಿರುವುದರಿಂದ ಈ ಮಾರ್ಗ ಇತಿಹಾಸ ಪುಟ ಸೇರುವಂತಾಗಿದೆ.
The historic “Kelghat: Road” which connects Goa and Karnataka state and has a history of hundreds of years will now be closed permanently. The Government of Karnataka has taken a decision to close this road permanently. Due to this, this important road, which has been used for trade, tourism and also for the army for hundreds of years, will now join the pages of history.