ಸುದ್ಧಿಕನ್ನಡ ವಾರ್ತೆ
ಪಣಜಿ: ಇತ್ತೀಚಿನ ದಿನಗಳಲ್ಲಿ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಪೊಟೊ ಮತ್ತು ವೀಡಿಯೋ ತಯಾರಿಸುವ ಟ್ರೆಂಡ್ ನಡೆಯುತ್ತಿದೆ. ಈ ಡಿಜಿಟಲ್ ತೆರೆಯಲ್ಲಿ ಇದೀಗ ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ರವರನ್ನೂ ಸೇರಿಸಲಾಗಿದೆ. ಗೂಗಲ್ ನ ಒಂದು ಜನಪ್ರೀಯ ಎಐ ಟೂಲ್ ಸಹಾಯದಿಂದ ಸಿದ್ಧಪಡಿಸಿದ ಗೋವಾ ಮುಖ್ಯಮಂತ್ರಿಗಳ ಆಕರ್ಷಕ 3ಡಿ ಪೋಟೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಬಿಜೆಪಿ ಅಧೀಕೃತ ಸೋಶಿಯಲ್ ಮೀಡಿಯಾ ದಲ್ಲಿಯೂ ಮುಖ್ಯಮಂತ್ರಿಗಳ ಈ ಪೋಟೊ ಶೇರ್ ಮಾಡಿಕೊಳ್ಳಲಾಗಿದೆ.

ವೈರಲ್ ಆಗಿರುವ ಈ ಪೋಟೊದಲ್ಲಿ ಮುಖ್ಯಮಂತ್ರಿಗಳ ಮುಖಭಾವ ಅತ್ಯಂತ ಸ್ಪಷ್ಟವಾಗಿ ಕಂಡುಬರುತ್ತಿದೆ. ಪೊಟೊದ ಒಳಗಿಂದ ಸಿಎಂ ಎದ್ದುಬಂದಂತೆ ಅಷ್ಟೊಂದು ಸ್ಪಷ್ಟವಾಗಿ ಕಂಡುಬರುತ್ತಿದೆ. ಮುಖದ ಹಾವಭಾವ, ಬಟ್ಟೆಯ ಮೇಲಿನ ಒಂದೊಂದು ನೂಲಿನ ಗೆರೆಗಳು ಕೂಡ ಅಷ್ಟೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಪೋಟೊ ತಯಾರಿಕೆಗರ ನ್ಯಾನೊ ಬನಾನಾ ಎಂಬ ಪ್ರಸಿದ್ಧ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.

ಬಿಜೆಪಿ ಗೋವಾ ಈ ಪೊಟೊವನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ಒಂದು ಸಾಮಾನ್ಯ ಪೊಟೊವನ್ನು ಕೆಲವೇ ಸೆಕೆಂಡುಗಳಲ್ಲಿ ಸಜೀವ ಎಂಬಂತೆ ಸೃಷ್ಠಿಸಲಾಗುತ್ತಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಪೋಟೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

 


Nowadays, there is a trend of making photos and videos using AI technology. Goa Chief Minister Dr. Pramod Sawant has also been added to this digital screen. An attractive 3D photo of Goa Chief Minister prepared with the help of a popular AI tool of Google is currently going viral on social media. This photo of the Chief Minister has also been shared on BJP’s official social media.